ಬೆಂಗಳೂರು: ಕೊರೊನಾ ವೈರಸ್ ಗಿಂತಲೂ ಕೊರೊನಾ ರೂಪಾಂತರಿಯಾದ ಒಮಿಕ್ರಾನ್ ವೈರಾಣು ಅಪಾಯಕಾರಿ ಎನ್ನಲಾಗುತ್ತಿದೆ. ಮತ್ತು ಇದರ ಹರಡುವಿಕೆಯ ತೀವ್ರತೆ ಕೊರೊನಾ ಮೊದಲ ಅಲೆಗಿಂತಲೂ ಹೆಚ್ಚು ಎನ್ನಲಾಗಿದೆ. ಇದರೊಂದಿಗೆ ಕೊರೊನಾ ಪ್ರತಿಬಂಧಕ ಎರಡು ಡೋಸ್ ಲಸಿಕೆ ಪಡೆದವರಲ್ಲೂ ಒಮಿಕ್ರಾನ್ ವೈರಾಣು ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.
ಇದು ಅಪಾಯಕಾರಿ ಅಲ್ಲ ಎಂದು ಆರಂಭಿಕವಾಗಿ ತಜ್ಞರ ಅಭಿಪ್ರಾಯವಾಗಿತ್ತು. ಆದ್ರೆ ಇದು ಅಪಾಯಕಾರಿ ಎಂದು ಸ್ವತಃ ವಿಶ್ವಸಂಸ್ಥೆಯೇ ಹೇಳುತ್ತಿದೆ. ಒಬ್ಬ ವ್ಯಕ್ತಿಗಿರುವ ರೋಗ ನಿರೋಧಕ ಶಕ್ತಿಯನ್ನೂ ದಾಟಿ ಹರಡಬಲ್ಲಷ್ಟು ತೀವ್ರತೆ ಒಮಿಕ್ರಾನ್ ಗೆ ಇದೆ. ಇನ್ನೂ ಕೂಡ ಒಮಿಕ್ರಾನ್ ವೈರಸ್ ನ ವೇಗದ ಕುರಿತು ಅಪೂರ್ಣ ಮಾಹಿತಿ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
PublicNext
03/12/2021 02:13 pm