ಭೋಪಾಲ್: ಕೊರೊನಾ ಇನ್ನು ಹೋಗಿಲ್ಲ ಎಲ್ಲರೂ ಜಾಗರೂಕತೆಯಿಂದ ಇರುವುದು ಅತಿ ಅವಶ್ಯಕ. ಕೋವಿಡ್ ಎರಡು ಲಸಿಕೆ ಪಡೆದರೂ ಸೋಂಕಿನಿಂದ ಸಾಯುವವರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಹೌದು ಸಾವಿನ ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದ ಹೊರತಾಗಿಯೂ ಭೋಪಾಲ್ ನಲ್ಲಿ 54 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಸಂಪೂರ್ಣ ಲಸಿಕೆ ಪಡೆದಾಗ್ಯೂ ಭೋಪಾಲದಲ್ಲಿ ಕೋವಿಡ್ ಗೆ ಒಂದೇ ವಾರದಲ್ಲಿ ಸಂಭವಿಸಿದ ಎರಡನೇ ಸಾವು ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ ಭೋಪಾಲ್ ನ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಐಐಎಂಎಸ್) ಮೃತಪಟ್ಟ ಮಹಿಳೆಯು ಕೋವಿಡ್ ನ ಎರಡು ಡೋಸ್ ಗಳನ್ನು ಪಡೆದುಕೊಂಡಿದ್ದರು ಎಂದು ಭೋಪಾಲ್ ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಡಾ ಪ್ರಭಾಕರ್ ತಿವಾರಿ ಪಿಟಿಐಗೆ ಖಚಿತಪಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಈ ವರೆಗೆ 7,92,999 ಕೋವಿಡ್ ಪ್ರಕರಣಗಳು ಖಚಿತವಾಗಿದ್ದು, 10,525 ಮಂದಿ ಸಾವಿಗೀಡಾಗಿದ್ದಾರೆ.
PublicNext
20/11/2021 10:12 pm