ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ರೂಪಾಂತರ ತತ್ತರದ ನಡುವೆ ಬ್ರಿಟನ್​ಗೆ ಒಕ್ಕರಿಸಿದ ಆಫ್ರಿಕಾ ವೈರಸ್​!

ಲಂಡನ್: ಬ್ರಿಟನ್​ನಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಅಲ್ಲಿನ ನಿವಾಸಿಗಳನ್ನು ಹಾಗೂ ವಿಶ್ವದ ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ತಜ್ಞ ವೈದ್ಯರು ಸಂಶೋಧನೆ ನಡೆಸಿರುವಾಗಲೇ ಆಫ್ರಿಕಾದ ಭಯಾನಕ ವೈರಸ್​ ಕಾಣಿಸಿಕೊಂಡಿದೆ.

ದಕ್ಷಿಣ ಆಫ್ರಿಕಾ ಮೂಲದ ಹೊಸ ಸೋಂಕು ಬ್ರಿಟನ್‌ನ ಇಬ್ಬರಲ್ಲಿ ಕಾಣಿಸಿಕೊಂಡು ಮತ್ತಷ್ಟು ಆತಂಕಕ್ಕೆ ದೂಡಿದೆ. ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಆಫ್ರಿಕಾದಲ್ಲಿ ಈ ವೈರಸ್​ ಕಳೆದ ವಾರ ಪತ್ತೆಯಾಗಿದ್ದು, ಅನೇಕರಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದೆ. ಮತ್ತೊಂದು ಭಯಾನಕ ಸಂಗತಿ ಎಂದರೆ ಕೊರೊನಾಗಿಂತಲು ಆಫ್ರಿಕಾ ವೈರಸ್‌ ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗಿದೆ.

Edited By : Vijay Kumar
PublicNext

PublicNext

24/12/2020 01:26 pm

Cinque Terre

48.86 K

Cinque Terre

3