ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‌ಗೆ ಲಸಿಕೆ ನೀಡಲು ಪುಣೆ ಮೂಲದ ಸೀರಮ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮುಂದಾಗಿದೆ. ಅದೂ ಕೂಡಾ ಪ್ರತಿ ಲಸಿಕೆ ದರ ಕೇವಲ 250 ರೂ.ಗೆ..!
ಇದು ವಿಶ್ವದ ಅತಿ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆಯಾಗಿದೆ. ಈ ಕುರಿತು ಭಾರತ ಸರ್ಕಾರದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲು ಕ್ಷಣಗಣನೆ ಆರಂಭವಾಗಿದೆ ಎಂದು ವರದಿಯಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್‌ನ ಲಸಿಕೆ ಸರಬರಾಜಿಗೆ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಈ ನಡುವೆ, ಕಳೆದ ಮಂಗಳವಾರವಷ್ಟೇ ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಸಂಸ್ಥೆಯು ತನ್ನ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಹೀಗಾಗಿ, ಲಸಿಕೆ ನೀಡಲು ಪೈಪೋಟಿಯಂತೂ ಆರಂಭವಾಗಿದೆ. ಈ ಕುರಿತು ಮಾತನಾಡಿದ ಸಂಸ್ಥೆ ಸಿಇಒ ಅದರ್ ಪೂನಾವಾಲಾ, ಖಾಸಗಿಯಾಗಿ ಖರೀದಿಸಲು ಈ ಲಸಿಕೆಗೆ ದರ ಪ್ರತಿ ಡೋಸ್‌ಗೆ 1 ಸಾವಿರ ರೂ, ಆಗಲಿದೆ. ಆದ್ರೆ, ಸರ್ಕಾರ ಭಾರೀ ಪ್ರಮಾಣದಲ್ಲಿ ಲಸಿಕೆ ಖರೀದಿಸಿದರೆ ಕಡಿಮೆ ಹಣಕ್ಕೆ ಸಿಗಲಿದೆ ಎನ್ನಲಾಗಿದೆ.
PublicNext
08/12/2020 03:46 pm