ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನಡುನೀರಲ್ಲಿ ಸಿಲುಕಿದ ಪಂಡರಾಪುರ ಭಕ್ತರ ರಕ್ಷಣೆ

ಹಾವೇರಿ: ನಡು ನೀರಿನಲ್ಲಿ ಸಿಲುಕಿದ 30 ಕ್ಕೂ ಅಧಿಕ ಭಕ್ತರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕು ಬರದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. 30 ಭಕ್ತರು ಪಂಡರಾಪುರಕ್ಕೆ ಹೋಗುತ್ತಿದ್ದರು. ರಾತ್ರಿ ಬರದೂರು ಗ್ರಾಮದ ಹೊರವಲಯದಲ್ಲಿರೋ ರಾಮಲಿಂಗ ಮಠದಲ್ಲಿ ವಾಸ್ತವ್ಯ ಹೂಡಿದ್ದರು.

ಧಾರಾಕಾರ ಮಳೆಗೆ ಬಾಜಿರಾಯನಹಳ್ಳ ತುಂಬಿದ್ದು 30 ಭಕ್ತರು ನಡು ನೀರಿನಲ್ಲಿರುವ ಮಠದಲ್ಲಿ ಸಿಲುಕಿದ್ದರು. ನೀರಲ್ಲಿ ಸಿಲುಕಿದವರು ಹಾವೇರಿ ತಾಲೂಕಿನ ತೋಟದಯಲ್ಲಾಪುರ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಭಾರಿ ಪ್ರಮಾಣದ ನೀರಿನ ದಿಕ್ಕು ತೋಚದಂತೆ ನಿಂತಿದ್ದ ಗ್ರಾಮಸ್ಥರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

Edited By : Shivu K
Kshetra Samachara

Kshetra Samachara

21/10/2024 12:06 pm

Cinque Terre

10.92 K

Cinque Terre

0

ಸಂಬಂಧಿತ ಸುದ್ದಿ