ನಿರಂತರ ಮಳೆಗೆ ಗದಗ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ. ನಡುರಸ್ತೆಯಲ್ಲಿ ಬಾವಿ ರೂಪದಲ್ಲಿ ಭೂಕುಸಿತವಾಗಿದ್ದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ನಾಗರಮಡುವು ಗ್ರಾಮದಲ್ಲಿ ಘಟನೆ ಜರುಗಿದೆ.
ಏಕಾಏಕಿ ಭೂಕುಸಿತ ಕಂಡ ಜನ ಕಂಗಾಲಾಗಿದ್ದಾರೆ.ನಾಗರಮಡುವು ಗ್ರಾಮವನ್ನು ಸಂಪರ್ಕಿಸುವ ನಡು ರಸ್ತೆಯಲ್ಲಿಯೇ ಈ ಭೂ ಕುಸಿತವಾದ್ದರಿಂದ ವಾಹನ ಸಂಚಾರ ಬಂದ್ ಆಗಿದೆ.
ಇತ್ತ ಗ್ರಾಮದ ಜನ್ರಲ್ಲಿಯೂ ಆತಂಕ ಹೆಚ್ಚಳವಾಗಿದೆ.ಅಂತರ್ಜಲ ಮಟ್ಟ ಹೆಚ್ಚಳದಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು ಸುಮಾರು 20 ಅಡಿ ಆಳದವರೆಗೆ ಕುಸಿದಿರುವ ಶಂಕೆ ವ್ಯಕ್ತವಾಗಿದೆ.
PublicNext
12/09/2022 02:58 pm