ಗದಗ: ಕಳೆದ ಹಲವಾರು ತಿಂಗಳಿಂದ ಗದಗ ತಾಲೂಕಿನ ನಾಗೇಂದ್ರಗಡ ಗ್ರಾಮದ ರೈತ ಸಮುದಾಯದ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.
ತಾಲೂಕಿನ ನಾಗೇಂದ್ರಗಡ ಸೇರಿದಂತೆ ಅಕ್ಕಪಕ್ಕ ಗುಡ್ಡದಲ್ಲಿ ಚಿರತೆಯ ಓಡಾಡುವದರ ಜತೆಗೆ ಹಸು ಹಾಗೂ ಕರುವಿನ ಮೇಲೆ ಮಾಡಿದ್ದ ದಾಳಿಯಿಂದಾಗಿ ರೈತರು ತಮ್ಮ ಜಮೀನಿನಲ್ಲಿ ಜಾನುವಾರು ಬಿಡಲು ಹಿಂದೇಟು ಹಾಕುವುದರ ಜತೆಗೆ ಭಯದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುವಂತಾಗಿತ್ತು.
ಕಳೆದ ಸೆಪ್ಟೆಂಬರ್ 30 ರಂದು ಎರಡು ಹಸುಗಳನ್ನು ಚಿರತೆ ಬಲಿ ಪಡೆದಿದ್ದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಗಂಭೀರವಾಗಿ ಪರಿಗಣಿಸಿ ಬೋನ್ ಇಟ್ಟು ನಿರಂತರವಾಗಿ ಕಾರ್ಯಚರಣೆಗೆ ಮುಂದಾಗಿದ್ದರು. ಸೋಮವಾರ ಬೆಳಗಿನ ಜಾಗ ನಾಗೇಂದ್ರಗಡ ಸಮೀಪದ ಮಾಲಗಿತ್ತಿ ಗ್ರಾಮದ ಗುಡ್ಡದಲ್ಲಿ ಇರಿಸಲಾಗಿದ್ದ ಬೋನ್ ನಲ್ಲಿ ಚಿರತೆ ಸೆರೆಯಾಗಿದೆ.
Kshetra Samachara
10/10/2022 07:19 pm