ಗದಗ: ಗದಗ ಜಿಲ್ಲೆ ಅಮರಕವಿ ಎಂದೇ ಖ್ಯಾತಿ ಪಡೆದ ಮಹರ್ಷಿ ವಾಲ್ಮೀಕಿ, ರಾಮಾಯಣ ಕಾವ್ಯದ ಮೂಲಕ ಇಡೀ ಮನುಕುಲಕ್ಕೆ ಮೌಲ್ಯಗಳ ಸಂದೇಶವನ್ನು ಸಾರಿದ ಮಹಾನ್ ಚಿಂತಕ ಎಂದು ತಹಶೀಲ್ದಾರ ಕಲಗೌಡ ಪಾಟೀಲ ಹೇಳಿದರು.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ರವಿವಾರ ತಾಲ್ಲೂಕಾಡಳಿತ ವತಿಯಿಂದ ಹಮ್ಮಿಕೊಳ್ಳಲಾದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಲ್ಮೀಕಿ ಮಹರ್ಷಿಯು ತನ್ನ ಮಹಾಕಾವ್ಯದಲ್ಲಿ ಬಿಂಬಿಸಲಾದ ತಾತ್ವಿಕ ಚಿಂತನೆ, ನೀತಿಬೋಧೆ, ಧರ್ಮ ಬೋಧೆ ಮತ್ತು ನೀತಿಯುಕ್ತ ರಾಜ್ಯನೀತಿ ಸಾರ್ವಕಾಲಿಕ ನೀತಿಯಾಗಿ ಉಳಿದಿವೆ. ಸಾವಿರಾರು ವರ್ಷ ಗತಿಸಿದರೂ ರಾಮನ ರಾಜನೀತಿ ಇಂದಿಗೂ ಮಾಸಿಲ್ಲ. ಅನೇಕ ಆಡಳಿತಾತ್ಮಕ ವ್ಯವಸ್ಥೆಗೆ ಅದು ಮಾದರಿಯಾಗಿದೆ. ಸಾಮಾಜಿಕ ಕೌಟುಂಬಿಕ ಮೌಲ್ಯಗಳು ಇಲ್ಲಿಯ ಸಹೃದಯತೆ, ಸಹಕಾರ, ತಾಳ್ಮೆ, ಸಮಾನತೆ, ಬ್ರಾತೃತ್ವದಂತಹ ಗುಣಗಳನ್ನು ಅನೇಕ ಘಟನೆಗಳ ಮೂಲಕ ಬಿತ್ತರಿಸುವ ವಾಲ್ಮೀಕಿ ಮೌಲ್ಯಗಳ ಮಹಾವೃಕ್ಷವಾಗಿದ್ದಾನೆ.
ರಾಮಾಯಣದಲ್ಲಿ ಬರುವ ಶ್ರವಣಕುಮಾರನ ಪಿತೃಭಕ್ತಿಯಂತಹ ನೂರಾರು ಉಪಕಥೆಗಳು ಸಮಾಜಕ್ಕೆ ದಾರಿದೀಪಗಳಾಗಿವೆ. ಇಂತಹ ಆದರ್ಶಮಯ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಮಾದರಿಯುತ ಜೀವನ ನಡೆಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಲ್ಲೇಶ.ಬಿ, ಬಿಇಒ ಜಿ ಎಲ್ ಮುಂದಿನಮನಿ, ಎಇಇ ಮಲ್ಲಿಕಾರ್ಜುನ, ಪಪಂ ಸದಸ್ಯ ಮಂಜುನಾಥ ಘಂಟಿ, ಹೊನ್ನಪ್ಪ ಶಿರಹಟ್ಟಿ, ಮುರಗೇಶ ಆಲೂರ, ಸೇರಿದಂತೆ ಇಲಾಖೆಯ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.
PublicNext
09/10/2022 05:25 pm