ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಪಾಳು ಬೀಳುತ್ತಿರುವ ಜಾಕ್ ವೇಲ್

ನರಗುಂದ: ನರಗುಂದ ತಾಲ್ಲೂಕಿನ ಮುಗನೂರು ಗ್ರಾಮದಲ್ಲಿ ಫಲವತ್ತಾದ ಭೂಮಿಗೆ ನೀರು ನೀಡಲು ಬೆಣ್ಣೆ ಹಳ್ಳದ ಪಕ್ಕದಲ್ಲಿ ನಿರ್ಮಾಣವಾದ ಜಾಕ್ ವೇಲ್ ಈಗ ರೈತರಿಗೆ ಬಳಕೆಯಾಗುತ್ತಿಲ್ಲ. ಜಾಕ್ ವೇಲ್ ನಿರ್ಮಾಣ ಮಾಡಲು ರೈತರಿಂದ ಭೂಮಿ ಪಡೆದ ಸರ್ಕಾರ ರೈತರಿಗೆ ಹಣ ನೀಡತ್ತಿಲ್ಲ ಎಂದು ಮೂಗನೂರ ಗ್ರಾಮದ ರೈತ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಜಾಕ್ ವೇಲ್ ನಿರ್ಮಾಣದ ವೇಳೆ ಅದರ ನಿರ್ವಹಣೆ ಮಾಡಲು ನಿಮಗೆ ಕೆಲಸ ನೀಡುತ್ತೇವೆ ಮತ್ತು ನಿಮ್ಮ ಜಮೀನಿಗೆ ಹಣ ನೀಡುತ್ತವೆ ಎಂದು ಹೇಳಿದ ಅಧಿಕಾರಿಗಳು ಈಗ ನಾಪತ್ತೆಯಾಗಿದ್ದಾರೆ. ಇದರಿಂದ ಮನನೊಂದ ರೈತ ನ್ಯಾಯ ಒದಗಿಸುವಂತೆ ಕೋರಿ ಪಬ್ಲಿಕ್ ನೆಕ್ಸ್ಟ್ ಹತ್ತಿರ ಮನವರಿಕೆ ಮಾಡಿದ್ದಾರೆ. ಅಂದಾಜು ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಜಾಕ್ ವೇಲ್ ಈಗ ಸ್ಥಳೀಯ ರೈತರ ಉಪಯೋಗಕ್ಕೆ ಬಾರದೆ ಇರುವುದು ದುರಂತವೇ ಸರಿ. ಆದ್ದರಿಂದ ಸ್ಥಳೀಯ ಅಧಿಕಾರಿಗಳು ಆದಷ್ಟು ಬೇಗ ಜಾಕ್ ವೇಲ್ ಕಾರ್ಯ ಪ್ರಾರಂಭ ಮಾಡಬೇಕು. ರೈತರಿಗೆ ಜಮೀನಿನ ಹಣ ನೀಡಬೇಕು, ಇಲ್ಲದೆ ಇದ್ದಲ್ಲಿ ಜಾಕ್ ವೇಲ್ ಪಾಳ ಬೀಳುವ ಸಾಧ್ಯತೆ ಇದೆ.

ವರದಿ - ಮಲ್ಲಿಕಾರ್ಜುನ ಪಬ್ಲಿಕ್ ನೆಕ್ಸ್ಟ್ ನರಗುಂದ

Edited By : Nagesh Gaonkar
PublicNext

PublicNext

15/12/2024 01:07 pm

Cinque Terre

7.44 K

Cinque Terre

0