ಗದಗ: ಗದಗ ತಾಲೂಕಿನ ಮುಳಗುಂದ ಶ್ರೀದೇವಿ ಪುರಾಣ ಅರ್ಥಾತ ದೇಹದ ಪುರಾಣವಾಗಿದೆ. ಮೌಲ್ಯಯುತ ಚಿಂತನೆ ಮತ್ತು ಅನುಷ್ಠಾನದಿಂದ ಮನುಷ್ಯ ಉನ್ನತಸ್ಥಾನಕ್ಕೆರಬೇಕು. ಪ್ರತಿಯೊಬ್ಬರ ಬದುಕಿನಲ್ಲಿ ಆಧ್ಯಾತ್ಮಿಕ ಚಿಂತನೆ ಮುಖ್ಯವಾಗಿದೆ. ಎಂದು ಗದಗ ಅಡವೀಂದ್ರ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ರೇಣುಕಾದೇವಿ ದೇವಸ್ಥಾನದಲ್ಲಿ ಶುಕ್ರವಾರ ನವರಾತ್ರಿ ಅಂಗವಾಗಿ ನಡೆದ ಶ್ರೀದೇವಿ ಪುರಾಣ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಉಸಿರು ಪೌಂಡೇಶನ್ ಸಂಸ್ಥೆಯ ನಿರ್ದೇಶಕಿ ರೇಣುಕಾ ಪಾಟೀಲ ಮಾತನಾಡಿ, ಭಾರತೀಯ ಸಂಸ್ಕ್ರತಿಯಲ್ಲಿ ಸ್ತ್ರೀ ಕುಲಕ್ಕೆ ಪೂಜ್ಯನೀಯ ಸ್ಥಾನವಿದೆ. ದೇವಿ ಆರಾಧನೆ ನವರಾತ್ರಿಗೆ ಅಷ್ಟೇ ಸೀಮಿತ ಮಾಡದೇ ನಮ್ಮ ನಿತ್ಯ ಬದುಕಿನಲ್ಲಿ ಕೆಟ್ಟಗುಣಗಳನ್ನ ಬಿಟ್ಟು, ಪರೋಪಕಾರ, ಸನ್ಮಾರ್ಗದತ್ತ ನಡೆಯಬೇಕು. ಎಂದರು.
ಕಾರ್ಯಕ್ರಮದಲ್ಲಿ ದಾನಿಗಳಿಗೆ ಸನ್ಮಾನ ಹಾಗೂ ಯೋಗ ಮಕ್ಕಳಿಂದ ಸಂಗೀತ ನೃತ್ಯ ನಡೆಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಅಶೋಕ ಸೋನಗೋಜಿ, ಯಲ್ಲಪ್ಪ ಜಿಡ್ಡಿ, ಎಸ್.ಸಿ.ಬಡ್ನಿ,ಸಿ.ಎಸ್.ಪತ್ರಿ, ಸಂಗಮೇಶ ಕೌಳಿಕಾಯಿ,ಬಸವರಾಜ ಹಾರೋಗೇರಿ,ರೇಣುಕಾ ಪಾಟೀಲ,ದೇವಪ್ಪ ನೀಲಗುಂದ,ಈರಪ್ಪ ದೋಟಿಕಲ್, ಹಾಗೂ ಪುರಾಣ ವಾಚಕ ಶರಣಯ್ಯ ಮರಿದೇವರಮಠ,ಪ್ರವಚನಕಾರ ಸಿದ್ದಣ್ಣ ಜವಳಿ, ಸಂಗೀತಕಾರ ಮೋಹನ ಮದ್ದಿನ, ಮಹಾಂತೇಶ ಬಳ್ಳಾರಿ, ಪ್ರಕಾಶ ಮದ್ದಿನ ಮೊದಲಾದವರು ಇದ್ದರು.
Kshetra Samachara
08/10/2022 05:30 pm