ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯದಶಮಿ, ಬನ್ನಿ ಮುಡಿದು ಹಬ್ಬ ಆಚರಣೆ

ಗದಗ : ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ನವರಾತ್ರಿಯ ಅಂಗವಾಗಿ ಬುಧವಾರ ವಿಜಯದಶಮಿ ಆಚರಣೆ ಸಂಪ್ರಾದಾಯಕ ಬನ್ನಿ ಮುಡಿಯುವದು, ದೇವರ ಪಾಲಿಕೆ ಉತ್ಸವ ಸಂಬ್ರಮದಿಂದ ನಡೆಯಿತು. ಗ್ರಾಮದೇವತೆ ದುರ್ಗಾ, ದ್ಯಾಮವ್ವ ದೇವಿಯರ ಭಾವಚಿತ್ರವನ್ನು ಕುದುರೆ ಸಾರುಟಿ ಮೆರವಣಿಗೆ ನಡೆಯಿತು. ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಕೆರೆದುರ್ಗಮ್ಮ, ರೇಣುಕಾ ದೇವಿ, ಪೇಟಿ ಬಸವೇಶ್ವರ ದೇವರ ಪಾಲಿಕೆ ಉತ್ಸವಗಳು ಭಕ್ತರ ಜೈ ಘೋಷಣೆಯೊಂದಿಗೆ ನಡೆದವು. ಆಯಾ ದೇವಸ್ಥಾನಗಳಿಂದ ಪಾಲಿಕೆ ಉತ್ಸವವು ಪ್ರಮುಖ ರಸ್ತೆ ಮೂಲಕ ಸಾಗಿ ಗಣೇಶ ದೇವಸ್ಥಾನದಲ್ಲಿರುವ ಬನ್ನಿಗಿಡಕ್ಕೆ ಪೂಜೆ ಸಲ್ಲಿಸಿ ಸಾಂಪ್ರದಾಯಕ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿತು. ಮೆರವಣೆಯಲ್ಲಿ ಡೊಳ್ಳು, ಭಜನೆ ಹಾಗೂ ಮಹಿಳೆಯರ ದೀಪದ ಆರತಿಯೊಂದಿಗೆ ಪಾಲ್ಗೊಂಡಿದ್ದರು.

ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠ ಸೇರಿದಂತೆ ವಿವಿಧ ಮಂದಿರಗಳಿಗೆ ವಿದ್ಯುತ್ ಅಲಂಕಾರದಿಂದ ಕಂಗೊಳಿಸಿದವು. ಸಾರ್ವಜನಿಕರು ಸಾಮೂಹಿಕವಾಗಿ ಭೇಟಿಕೊಟ್ಟು ತಮ್ಮ ಆಪ್ತರು, ಸಂಬಂಧಿಗಳಿಗೆ ಬನ್ನಿಕೊಟ್ಟು ಬಂಗಾರದಂಗ ಇರೋಣ ಎಂದು ಬನ್ನಿ ಪತ್ರಿ ವಿನಮಯ ಮಾಡಿಕೊಂಡರು.

Edited By : PublicNext Desk
Kshetra Samachara

Kshetra Samachara

06/10/2022 09:49 am

Cinque Terre

7.08 K

Cinque Terre

0