ಗದಗ: ಗದಗ ಜಿಲ್ಲೆಯ ಬಂಡಾಯದ ನೆಲ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕಂಚುಗಾರನಹಳ್ಳಿ ಸತೀಶ್ ಅವರು ಸಮಾಜಕ್ಕೆ ಪೂರಕವಾಗಿ ಒಂದು ಉತ್ತಮ ಸಂದೇಶವನ್ನು ನೀಡುವ ಉದ್ದೇಶದಿಂದ "ಸ್ಯಾನಿಟರಿ ಪ್ಯಾಡ್" ಎಂಬ ಅಪರೂಪದ ಕಾದಂಬರಿಯನ್ನು ರಚಿಸಿ ಅಭಿಯಾನ ನಡೆಸಿದ್ದಾರೆ.
ಬೆನಕನಕೊಪ್ಪ ಗ್ರಾಮದಲ್ಲಿ ಯುವಸಮೂಹದ ಸಂಘಟನೆ ಮಾಡಿ ಅಭಿಯಾನದ ಮುಖಾಂತರ ವಿಧ್ಯಾರ್ಥಿನಿ ಸಮೂಹ ,ಕೂಲಿ ಕಾರ್ಮಿಕ ಬಡ ಮಧ್ಯಮ ವರ್ಗದ ಮಹಿಳಾ ಸಮೂಹ ಅನುಭವಿಸುತ್ತಿರುವ ಮುಜುಗರ,ಅನಾರೋಗ್ಯ, ಅಸಹಾಯಕತೆಯಿಂದ ಪರಿತಪಿಸುತ್ತಿರುವ ಮಹಿಳಾಮನಿಗಳ ಸಮಸ್ಯೆ ಹಾಗೂ ಅವರ ಆರೋಗ್ಯ ರಕ್ಷಣೆಯ ಕವಚವಾಗಿರುವ ಸ್ಯಾನಿಟರಿ ಪ್ಯಾಡ್ ಅನ್ನು ನಿರಂತರ ಉಚಿತವಾಗಿ ಒದಗಿಸುವ ಜವಾಬ್ದಾರಿಯನ್ನು ಸರಕಾರ ಹೊರಲೇಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳು ಸಿಗುವ ಒಂದು ಯೋಜನೆ ಆದಷ್ಟು ಬೇಗ ಸರ್ಕಾರದ ಗಮನಕ್ಕೆ ತಲುಪಿಸಲು ತಾವೆಲ್ಲರೂ "ಸಾಹಿತ್ಯದ ಮೂಲಕ ಸ್ಯಾನಿಟರಿ ಪ್ಯಾಡ್" ಎಂಬ ಸೊಗಸಾದ ಕಾದಂಬರಿಯನ್ನು ಒಕ್ಕೋರಲಿನಿಂದ ಬೆಂಬಲಿಸಿ ಅಭಿಯಾನಕ್ಕೆ ನನ್ನೊಂದಿಗೆ ಕೈ ಜೋಡಿಸಿ ಅಭಿಯಾನದ ಯಶಸ್ಸಿಗೆ ಶ್ರಮಿಸೋಣ ಎಂದರು.
Kshetra Samachara
04/10/2022 10:58 am