ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಪೌರ ನೌಕರರ ಪ್ರತಿಭಟನೆ

ಗದಗ: ಗದಗ ತಾಲೂಕಿನ ಮುಳಗುಂದ ಪೌರ ನೌಕರರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೆರಿಸುವಂತೆ ಆಗ್ರಹಿಸಿ ಸ್ಥಳೀಯ ಪೌರ ನೌಕರರ ಸಂಘದ ವತಿಯಿಂದ ಬುಧವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು,ನಂತರ ಪ.ಪಂ ಮುಖ್ಯಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪೌರ ನೌಕರರ ಸಂಘ ಮುಳಗುಂದ ಶಾಖೆಯ ಅಧ್ಯಕ್ಷ ಎಸ್.ಎಮ್.ಅಮರಾಪೂರ ಮಾತನಾಡಿ, ರಾಜ್ಯ ಸಂಪುಟದ ಸಭೆಯಲ್ಲಿ ತೀರ್ಮಾನಿಸಿರುವ ೧೧೩೩೮ ಹುದ್ದೆಗಳನ್ನು ಹೊರತುಪಡಿಸಿ ಇನ್ನುಳಿದ ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಪೌರ ಕಾರ್ಮಿಕರು ಮತ್ತು ಇನ್ನಿತರೆ ವಿವಿಧ ವೃಂದ ನೌಕರರನ್ನ ನೇರಪಾವತಿ ಅಡಿ ತಂದು ವಿಶೇಷ ನಿಯಮಗಳನ್ವಯ ಖಾಯಂಗೊಳಿಸಬೇಕು. ಎಂದು ಆಗ್ರಹಿಸಿದರು.

ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರ ನೌಕರರಿಗೂ ಕೆಜಿಐಡಿ ಯೋಜನೆಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನ ಈಡೆರಿಸಬೇಕು. ನಮ್ಮ ಬೇಡಿಕೆಗಳ ಈಡೆರಿಕೆಗೆ ಗಡವು ಪಡೆದುಕೊಂಡ ಸಮಯದೊಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಸಲುವಾಗಿ ರಾಜ್ಯದ ಎಲ್ಲಾ ಪೌರ ನೌಕರರು ಸರ್ಕಾರದ ಮೇಲೆ ಅಸಮದಾನ ಹೊರ ಹಾಕಲು ಒಂದು ತಿಂಗಳ ಕಾಲ ಕಪ್ಪು ಪಟ್ಟಿ ಧರಿಸಿ ಸಾರ್ವಜನಿಕರಿಗೆ ತೋಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತೇವೆ. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಎಂ.ಜಮಾಲಸಾಬನವರ,ಜಿಲ್ಲಾ ನಿರ್ದೇಶಕರಾದ ರಾಮಪ್ಪ ಚಲವಾದಿ,ಪರುಶರಾಮ ಸಣ್ಣತಮ್ಮಣ್ಣನವರ, ಆರ್.ಎಂ.ಹೊಸಮನಿ, ಮಹಾಂತಪ್ಪ ದಿವಟರ, ಬಿ.ಎಸ್.ಹೊರಪೇಟಿ,ಬಿ.ಸಿ.ಮೊಕಾಸಿ, ಎಂ.ಡಿ.ಬಳ್ಳಾರಿ, ರೇಖಾ ಹೊಸಮನಿ, ಗಾಯತ್ರಿ ಚಲವಾದಿ, ಬಸಪ್ಪ ಮ್ಯಾಗೇರಿ, ಹನುಮಂತಪ್ಪ ಕೆಳಗೇರಿ, ಶಿವಪ್ಪ ಕಾಳೆ, ಲಕ್ಷ್ಮವ್ವ ಸಣ್ಣತಮ್ಮಣ್ಣವರ, ಮಹಾಂತಪ್ಪ ಮ್ಯಾಗೇರಿ, ಕಮಲವ್ವ ದೊಡ್ಡಮನಿ ಮೊದಲಾದವರು ಇದ್ದರು.

Edited By : PublicNext Desk
Kshetra Samachara

Kshetra Samachara

28/09/2022 06:33 pm

Cinque Terre

6.44 K

Cinque Terre

0

ಸಂಬಂಧಿತ ಸುದ್ದಿ