ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅಕ್ರಮ ಮದ್ಯ ಹಾಗೂ ಬಡ್ಡಿ ದಂಧೆ ಕಡಿವಾಣಕ್ಕೆ ಒತ್ತಾಯಿಸಿ ಮನವಿ

ಗದಗ: ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ, ಮೀಟರ್ ಬಡ್ಡಿ ದಂಧೆ ಹಾಗೂ ಮಟಕಾ ನಿಷೇಧಿಸುವಂತೆ ಒತ್ತಾಯಿಸಿ ಶ್ರೀರಾಮ ಸೇನಾ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಸಂಗೊಳ್ಳಿ ರಾಯಣ್ಣ ಯುವ ಘಟಕದ ವತಿಯಿಂದ ಗುರುವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ಮುಖಂಡ ಸಂತೋಷ ಕುರಿ ಮಾತನಾಡಿ, ಪಟ್ಟಣದಲ್ಲಿನ ಮದ್ಯದಂಗಡಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಖಾನಾವಳಿ ಹಾಗೂ ದಾಬಾಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುವುದಲ್ಲದೆ ಸಣ್ಣ ಡಬ್ಬಿ ಅಂಗಡಿಗಳಲ್ಲಿ ಸಹ ಸಾರಾಯಿ ಮಾರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಪಟ್ಟಣದ ಸುತ್ತಮುತ್ತಲೂ ಮೀಟರ್ ಬಡ್ಡಿ ದಂಧೆ ಕೂಡಾ ಹೆಚ್ಚುತ್ತಿದೆ.

ಮಟಕಾ ದಂಧೆ ಕೂಡಾ ಅವ್ಯಾಹತವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ. ಹಿಂದುಳಿದ ಪಟ್ಟಣ ಎಂದೇ ಕರೆಯಲ್ಪಡುವ ಶಿರಹಟ್ಟಿಯಲ್ಲಿ ಬಡತನ ರೇಖೆಯ ಬಹುತೇಕ ಕುಟುಂಬಗಳು ಕಷ್ಟದ ಜೀವನ ನಡೆಸುತ್ತಿದ್ದಾರೆ. ಕುಟುಂಬದ ಸದಸ್ಯರು ಅಕ್ರಮ ಸಾರಾಯಿ ಅಥವಾ ಮಟಕಾ ಚಟಕ್ಕೆ ದಾಸಾರಾಗುತ್ತಿದ್ದು, ಇಂತಹ ಚಟ ಮಾಡಲು ಈ ಮೀಟರ್ ಬಡ್ಡಿ ದಂಧೆಗೆ ಬಲಿಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂಬಂಧಪಟ್ಟ ಇಲಾಖೆಯರು ಸೂಕ್ತ ಕ್ರಮ ತೆಗೆದುಕೊಂಡು ಈ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಾಸು ಜಾಧವ, ಪರಶು ಡೊಂಕಬಳ್ಳಿ, ಅಶೋಕ ವರವಿ, ಚಂದ್ರು ಜಿಡಗಣ್ಣವರ, ಹನುಮಂತ ಘಂಟಿ, ಕಾರ್ತಿಕ ಗೌಳಿ, ಹೃತಿಕ ಮಜ್ಜಗಿ, ಸಂತೋಷ ಮಳ್ಳಣ್ಣವರ, ಮಲ್ಲೇಶ ಕುದರಿ, ಮಲ್ಲಪ್ಪ ಹಾಲಪ್ಪನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/09/2022 10:54 am

Cinque Terre

5.14 K

Cinque Terre

0