ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸಮೀಪದ ಸೂಡಿ ಗ್ರಾಮದ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ ಹಾಗೂ ತಾಲೂಕಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳು ಹಾಗೂ ಫೋಕ್ಸೊ ಕಾಯ್ದೆ ಅಡಿ ಕಾನೂನು ಸೇವೆ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರೋಣ, ಗಜೇಂದ್ರಗಡ ದಿವಾನಿ ನ್ಯಾಯಾಧೀಶ ವಿಜಯಕುಮಾರ ಹಿರೇಮಠ ಮಾತನಾಡಿ, ಕಾನೂನುಗಳನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಸಂವಿಧಾನದ ಆಶಯಗಳು ಯಶಸ್ವಿಯಾಗುತ್ತದೆ. ವಿಜ್ಞಾನ, ತಂತ್ರಜ್ಞಾನ ಬೆಳೆದಿದ್ದರೂ ಸಹ ಇಂದಿಗೂ ಕಾನೂನುಗಳ ಸಮರ್ಪಕವಾಗಿ ಪಾಲನೆ ಆಗುತ್ತಿಲ್ಲ. ಶಿಕ್ಷಣದ ಜ್ಞಾನವಿದ್ದರೂ, ಕಾನೂನು ಜ್ಞಾನದ ಕೊರತೆಯಿಂದಾಗಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕನಿಷ್ಠ ಕಾನೂನು ಅರಿವು ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಗಜೇಂದ್ರಗಡ ವಕೀಲರ ಸಂಘದ ಅಧ್ಯಕ್ಷ ಕೆ.ವಾಯ್.ಅವಧೂತ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದಾಳಿ ಹಾಗೂ ದಬ್ಬಾಳಿಕೆಗಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸುಗುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಅಪರಾಧವಾಗಿದೆ. ಇಂತಹ ದೌರ್ಜನ್ಯ ಕೃತ್ಯಗಳನ್ನು ತಡೆಯಲು ಬಿಗಿ ಕಾನೂನುಗಳಿದ್ದು, ವಿದ್ಯಾರ್ಥಿಗಳು ಇಂತಹ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಡಾ.ಕೆ.ಎ.ಹಾದಿಮನಿ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸು ಹರಿಯುವ ನೀರಿದಂತೆ. ಹೀಗಾಗಿ ಕ್ಷಣಿಕ ಸುಖ ನೀಡಿ, ಜೀವನವನ್ನು ಹಾಳು ಮಾಡುವ ತಂಬಾಕು ಸೇರಿ ಇತರ ಮಾದಕ ವಸ್ತುಗಳಿಂದ ದೂರವಿದ್ದು ಉತ್ತಮ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು ಎಂದರು.
ಮುಖ್ಯೋಪಾಧ್ಯಾಯ ಪಿ.ಎಫ್.ಗೌಡರ, ಪ್ರಾಚಾರ್ಯ ಎಸ್.ವಿ.ಅಬ್ಬಿಗೇರಿ, ಎಸ್.ಕೆ.ಕಾಜಗಾರ, ಎಸ್.ಆರ್.ಪಲ್ಲೇದ, ಎಂ.ಎಂ.ಅರಳಿಗಡಿದ, ಪಿ.ಸಿ.ಬಸರಕೋಡ, ಆರ್.ಡಿ.ಕುಟಕನಕೇರಿ, ಎಸ್.ಬಿ.ಕುಲಕರ್ಣಿ, ಎಸ್.ಎಸ್.ಚೋಗಣಸಿ, ಸಿ.ಪಿ.ಕಮ್ಮಾರ ಸೇರಿ ಇತರರು ಇದ್ದರು.
Kshetra Samachara
22/09/2022 05:42 pm