ಮಳೆಯ ನೀರಿನಲ್ಲಿ ನೂರಾರು ಮಡಿಕೆಗಳು ಕೊಚ್ಚಿಕೊಂಡು ಹೋಗಿ ಲಕ್ಷಾಂತರ ರೂ. ನಷ್ಟವಾಗಿದ್ದು, ಗದಗ ನಗರದ ಒಕ್ಕಲಗೇರಿಯ ನಿವಾಸಿ ದೇವಕ್ಕ ಚಕ್ರಸಾಲಿ ಎಂಬ ವೃದ್ಧೆ ಕಣ್ಣೀರು ಹಾಕುತ್ತಿದ್ದಾಳೆ.
ಕುಂಬಾರಿಕೆಯ ಜೀವನ ಸಾಗಿಸುತ್ತಿದ್ದ ವೃದ್ಧ ಮಹಿಳೆ ಸಾಲಾಸೂಲ ಮಾಡಿ ಮಡಿಕೆಗಳನ್ನು ಹಗರಿಬೊಮ್ಮನಹಳ್ಳಿಯಿಂದ ತರಿಸಿಕೊಂಡಿದ್ದರು. ದೀಪಾವಳಿ ಹಬ್ಬಕ್ಕೆಂದು ಹಣತೆಗಳನ್ನು ಮಡಿಕೆಗಳನ್ನು ತರಿಸಿಕೊಂಡಿದ್ರು. ಇವು ಎಲ್ಲವೂ ಮಳೆನೀರಿನ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದೆ. ಅಂದಾಜು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಮಡಿಕೆ ಕುಡಿಕೆ ಹಾಗೂ ಮಣ್ಣಿನ ಒಲೆಗಳು ಹಾನಿಗೀಡಾಗಿದೆ.
ಜೀವನಕ್ಕೆ ಆಸರೆಯಾಗಿದ್ದ ಮಣ್ಣಿನ ಮಡಿಕೆ ಹಾನಿ ಕಂಡು ವೃದ್ಧ ಮಹಿಳೆ ಕಣ್ಣೀರು ಹಾಕುತ್ತಿದ್ದಾಳೆ. ಜೊತೆಗೆ ಅಧಿಕಾರಿಗಳಿಗೆ ಇತ್ತ ಸುಳಿಯಲಿಲ್ಲ ಎಂದು ಹಿಡಿಶಾಪ ಹಾಕಿ ಆಕ್ರೋಶ ಹೊರಹಾಕಿದ್ದಾಳೆ.
PublicNext
13/09/2022 08:44 pm