ಮಳೆಯಿಂದಾಗಿ ಹಳ್ಳದ ರಸ್ತೆ ಹದಗೆಟ್ಟ ಕಾರಣದಿಂದ ಶವವನ್ನು ಹೊತ್ತು ಹಳ್ಳದಲ್ಲಿಯೇ ಸಾಗಿದ ಅಮಾನವೀಯ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಹಳ್ಳದಲ್ಲಿ ಜರುಗಿದೆ.
ಹಳ್ಳಿಕೇರಿ ಗ್ರಾಮದ ಕರಿಯಪ್ಪ ಗೌಡರ(68) ಮೃತ ದುರ್ದೈವಿಯಾಗಿದ್ದು ಶುಕ್ರವಾರ ಬೆಳಿಗ್ಗೆ ಹಳ್ಳದಾಟಿ ಹೊಲಕ್ಕೆ ಕೆಲಸಕ್ಕೆಂದು ತೆರಳಿದ್ದರು. ಏಕಾಏಕಿ ರಕ್ತದೊತ್ತಡದಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಹಳ್ಳದ ರಸ್ತೆ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ಸಾಗಿಸಲು ವಿಳಂಬವಾಗಿದೆ. ಹೀಗಾಗಿ ಹೊಲದಲ್ಲೇ ಕರಿಯಪ್ಪ ಮೃತರಾಗಿದ್ದಾರೆ. ಶವ ಸಾಗಿಸುವಷ್ಟೂ ಕೂಡ ರಸ್ತೆ ಸಂಪರ್ಕ ಸೂಕ್ತವಾಗಿಲ್ಲ. ಹೀಗಾಗಿ ಶವ ಸಾಗಿಸಲು ವಾಹನಗಳ ಹಿಂದೇಟು ಹಾಕಿವೆ. ವಿಧಿಯಿಲ್ಲದೇ ಹಳ್ಳದಲ್ಲೇ ಶವವನ್ನು ಹೊತ್ತು ಗ್ರಾಮಸ್ಥರ ಸಾಗಿದ್ದಾರೆ.
PublicNext
16/09/2022 07:21 pm