ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಬಸ್ ತಂಗುದಾಣದಲ್ಲಿ ರಸ್ತೆ ದುರಸ್ತಿ ಇದ್ದ ಕಾರಣ ಗುತ್ತಲಕ್ಕೆ ವಾಹನಗಳು ಸಂಚರಿಸುವುದಿಲ್ಲ ಎಂಬ ನಾಮಫಲಕ ಹಾಕಲಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಗೆ ಬಸ್ ಸಂಚಾರ ಕಡಿತಗೊಳಿಸಲಾಗಿದೆ. ಬಟ್ಟೂರ, ಬಡ್ನಿ, ಬೆಳಟ್ಟಿ, ಛಬ್ಬಿ, ಸೂರಣಗಿ, ಚನ್ನಪಟ್ಟಣ ಗ್ರಾಮಗಳಿಗೆ ಹೋಗುವ ಬಸ್ಸುಗಳು, ಹಳ್ಳಕೊಳ್ಳಗಳಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿರುವ ಕಾರಣ ಸಂಚಾರ ಮೊಟಕುಗೊಳಿಸಿದೆ.
ಮಳೆಯಿಂದ ಕೆಲವೊಂದು ಗ್ರಾಮಗಳಲ್ಲಿ ಹಳ್ಳಕೊಳ್ಳ ಹರಿದು ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಸ್ ಗಳು ಸಂಚರಿಸುತ್ತಿಲ್ಲ. ಆಯಾ ಪಂಚಾಯತಿಗೆ ಕೆ.ಎಸ್.ಆರ್.ಟಿ.ಸಿ. ಯಿಂದ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PublicNext
10/09/2022 06:45 pm