ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ತುರ್ತು ಸಭೆಗೆ ಸಮಯಕ್ಕೆ ಸರಿಯಾಗಿ ಬಾರದ ತಹಶೀಲ್ದಾರ ನಿರ್ಲಕ್ಷ್ಯಕ್ಕೆ ಪುರಸಭೆ ಸದಸ್ಯರ ಅಸಮಾಧಾನ

ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣ ಇಟ್ಟಿಕೇರೆಯೂ ತುಂಬಿ ಕೋಡಿ ಬಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು ಸಮಸ್ಯೆಯನ್ನು ಬಗೆಹರಿಸಲು ಪುರಸಭೆಯ ಸಭಾ ಭವನದಲ್ಲಿ ಅಶ್ವಿನಿ ಅಂಕಲಕೋಟಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಎಲ್ಲರೂ ಹಾಜರಿದ್ದರು ತಹಶೀಲ್ದಾರ ಸತ್ತಿಗೇರಿ ಅವರು 2 ತಾಸುಗಳತನಕ ಬರದ ಕಾರಣ ಪುರಸಭೆ ಸದಸ್ಯರಾದ ವಿಜಯ ಕರಡಿಯವರು ತಹಶೀಲ್ದಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಒಪ್ಪಿಗೆ ಸಭೆ ಕರೆಯಲಾಗಿದ್ದು ಒಬ್ಬ ದಂಡಾಧಿಕಾರಿಗಳಿಗೆ ಸಮಯ ಪ್ರಜ್ಞೆ ಇಲ್ಲವಾ? ಒಬ್ಬ ದಂಡಾಧಿಕಾರಿಗಳು ಸಮಯಕ್ಕೆ ಬೆಲೆ ಕೊಡಲ್ಲ ಅಂದರೆ ಜನಸಾಮಾನ್ಯರ ನೋವುಗಳನ್ನು ಹೇಗೆ ಬಗೆಹರಿಸುತ್ತಾನೆ ಎಂದು ಕೆಂಡಾಮಂಡಲ ಆದರು ನಮ್ಮ ಪುರಸಭೆಯಿಂದ ನಿನ್ನೆನ್ನೇ ಸೂಚನಾ ಪತ್ರ ನೀಡಿದರು ತಹಶೀಲ್ದಾರ ಎರಡು ತಾಸು ಗಟ್ಟಲೆ ಬರಲ್ಲ ಅಂದರೆ ಅವರಿಗಾಗಿ ನಾವು ಕಾಯಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಟ್ಟಿಕೇರೆಯ ನೀರನ್ನು ಹೊರಹಾಕಲು ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ ಹಾಗೂ ಜಿ.ಎಂ.ಮಹಾಂತಶೆಟ್ಟರ ಒಪ್ಪಿಗೆ ಇದ್ದರೆ ನಮ್ಮ ಪುರಸಭೆ ಸರ್ವಸದಸ್ಯರ ಒಪ್ಪಿಗೆ ಇದೆ ಎಂದು ಸದಸ್ಯರು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ, ತಹಶೀಲ್ದಾರ ಪರಶುರಾಮ ಸತ್ತಿಗೇರಿ ಉಪಾಧ್ಯಕ್ಷೆ ಮಂಜವ್ವ ನಂದೆಣ್ಣವರ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಇಂಜಿನಿಯರ್ ಎಟಿ. ಗೌಡರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಧರ ತಳವಾರ ಸೇರಿದಂತೆ ಸರ್ವಸದಸ್ಯರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

26/09/2022 03:13 pm

Cinque Terre

12.6 K

Cinque Terre

0