ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಆಂಜನೇಯ ದೇವಸ್ಥಾನ ಮುಂದೆ ಸ್ಥಾಪಿತವಾಗಿರುವ 21 ಅಡಿ ಎತ್ತರದ ಗಣೇಶ ಮೂರ್ತಿ ಮುಂದೆ ಹಾಗೂ ಸೊಪ್ಪಿನಕೇರಿ ಓಣಿಯ ಗಜಾನನ ಯುವಕ ಮಂಡಳ ಇವರು ಪ್ರತಿಷ್ಠಾಪನೆ ಮಾಡಿರುವ 15 ಅಡಿ ಎತ್ತರದ ಗಣೇಶ ಮೂರ್ತಿ ಮುಂದೆ ನಗರದ ಆರ್ ಎಸ್ ಎಸ್ ಕಾರ್ಯಕರ್ತರಿಂದ ಘೋಷವಾದನ ನಡೆಯಿತು.
ಪ್ರಮುಖ ವಾದ್ಯಗಳಲ್ಲೊಂದಾದ ಘೋಷವಾದನ ನೆರೆದಿದ್ದ ನೂರಾರು ಜನರ ಮನ ಸೆಳೆಯಿತು. ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಆರ್ ಎಸ್ ಎಸ್ ನಿಂದ ಗಣೇಶನ ಪ್ರತಿಷ್ಠಾಪನೆ ಮಾಡಿದ ಕಡೆ ಸುಮಾರು ಅರ್ಧ ಗಂಟೆಗಳ ಕಾಲ ಘೋಷ ವಾದನ ನಡೆಯಿತು.
PublicNext
12/09/2022 05:21 pm