ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ಯುವ ಸಂಭ್ರಮಕ್ಕೆ ಮೆರಗು ತಂದ ಉತ್ತರ ಕರ್ನಾಟಕದ ಜಾನಪದ ಕಲಾವಿದರು

ಶಿರಹಟ್ಟಿ: ಪಟಣದ ಬೀರೇಶ್ವರ ದೇವರ 19 ನೇ ವರ್ಷದ ಕಾರ್ತಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಯುವ ಸಂಭ್ರಮ ಜಾತ್ರಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಸುಜಾತಾ ದೊಡ್ಡಮನಿ ಅವರು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ನಾಡಿನ ಸಂಸ್ಕೃತಿ ಸಾರುವ, ನಮ್ಮ ಬದುಕಿನ ಇತಿಹಾಸವನ್ನು ಪ್ರತಿಬಿಂಬಿಸುವ ಜಾನಪದ ಕಲೆ, ಸಂಪ್ರದಾಯ, ಆಚರಣೆ, ಉಡುಗೆ - ತೊಡುಗೆಗಳು, ಸಾಹಿತ್ಯ ಮತ್ತು ಸಂಗೀತ ಇವುಗಳನ್ನು ಉಳಿಸಿ, ಪೋಷಿಸುವ ಜವಾಬ್ದಾರಿ ನಮ್ಮೆಲರದಾಗಿದೆ ಎಂದು ಹೇಳಿದರು.

ನಂತರ ಜಾನಪದ ಲೋಕದ ಧೃವತಾರೆ ಎಂದೇ ಖ್ಯಾತರಾದ ಮಾಳು ನಿಪನಾಳ, ಹಾಗೂ ಚಂದುಳ್ಳ ಚೆಲುವಿ ಹಾಡಿನ ಗಾಯಕ ಗುಡ್ಡಪ್ಪ ಮಾಸ್ತರ, ಜೊತೆಗೆ ಖ್ಯಾತ ಜಾನಪದ ಗಾಯಕ ಬೊಂಬಾಟ್ ಬಸಣ್ಣ, ಸರಿಗಮಪ ರನ್ನರ್ ಆಫ್ ಆದ ರಮೇಶ ಲಮಾಣಿ, ಇವರುಗಳ ಜಾನಪದ ಗೀತೆಗಳಿಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದ ಜಾನಪದ ಪ್ರೇಮಿಗಳು.

-ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ

Edited By : Shivu K
PublicNext

PublicNext

05/12/2024 08:08 am

Cinque Terre

39.5 K

Cinque Terre

0