ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಗದಗ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದಿಂದ ವೆಂಕಟಾಪುರ ಗ್ರಾಮಕ್ಕೆ ಬರುವ ರಸ್ತೆಯ ಮಧ್ಯದಲ್ಲಿರುವ ಹನಿ ನಿರಾವರಿ ಘಟಕದ ಪಕ್ಕದ ಮುಖ್ಯರಸ್ತೆಯಲ್ಲಿ ರಸ್ತೆಗಾವಲು ನಿರ್ವಹಿಸುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಅಂದಾಜು 5,000 ರೂ. ಮೌಲ್ಯದ ಸಣ್ಣ ಸಣ್ಣ ಪ್ರಮಾಣದ ಒಟ್ಟು 59 ಒಣ ಗಾಂಜಾ ತುಂಬಿದ ಪೌಚಗಳನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ ಹೊರಟಿದ್ದ ಓರ್ವ ವ್ಯಕ್ತಿಯು ಸಿಕ್ಕಿದ್ದು, ಇದು ಎನ್.ಡಿ.ಪಿ.ಎಸ್ ಕಾಯ್ದೆ 1985ರ ಉಲ್ಲಂಘನೆಯಾಗಿದ್ದು ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.

ಈ ಕುರಿತಂತೆ ಆರೋಪಿಯು ವೆಂಕಟಾಪುರ ಗ್ರಾಮದ ವೆಂಕಟೇಶ ಮಲ್ಲಪ್ಪ ಹರಣಶಿಕಾರಿ. ತಿಳಿದು ಬಂದಿದೆ ಈತನನ್ನು ದಸ್ತಗಿರಗೊಳಿಸಿದ್ದು ಹಾಗೂ ವಾಹನ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ದ್ವಿಚಕ್ರವಾಹನ ಮತ್ತು ಒಣ ಗಾಂಜಾವನ್ನು ಜಫ್ತು ಪಡಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು ಮಾನ್ಯ ಪ್ರಥಮ ದರ್ಜೆ ನ್ಯಾಯಾಧೀಶರು ಜೆ.ಎಂ.ಎಫ್.ಸಿ ನ್ಯಾಯಾಲಯ ಮುಂಡರಗಿ ಅವರಲ್ಲಿ ಒಪ್ಪಿಸಲಾಗಿದೆ.

Edited By : PublicNext Desk
PublicNext

PublicNext

20/09/2022 05:17 pm

Cinque Terre

5.9 K

Cinque Terre

0

ಸಂಬಂಧಿತ ಸುದ್ದಿ