ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಗಡ್ಡಯ್ಯ ನಗರ ಮತ್ತು ಉಪನಾಳ ಪಾರ್ಕ್‌ನಲ್ಲಿನ ಮನೆಗಳಲ್ಲಿ ಚಿನ್ನಾಭರಣ ದೋಚಿದ್ದ ಕಳ್ಳನನ್ನು ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದು, ಆತನಿಂದ 60 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 100 ಗ್ರಾಮ ಬೆಳ್ಳಿ ಚೈನ್, 1500 ನಗದು ಹಣ, ಒಂದು ಕ್ರಿಮಿನಾಶಕ ಪಂಪ್‌ನ ಚಾರ್ಜರ್ ವಶಕ್ಕೆ ಪಡೆಯಲಾಗಿದೆ.
ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿ.ಎಸ್.ಪಿ, ಶಿರಹಟ್ಟಿ ವೃತ್ತದ ಸಿಪಿಐ ನಾಗರಾಜ ಮಾಡಳ್ಳಿ, ಮಾರ್ಗದರ್ಶನದಲ್ಲಿ ಪಿ.ಎಸ್.ಐ ನಾಗರಾಜ ಗಡದ, ಕ್ರೈಂ ವಿಭಾಗದ ಪಿಎಸ್ಐ ಟಿ.ಕೆ ರಾಠೋಡ ಮತ್ತು ಲಕ್ಷ್ಮೇಶ್ವರ ಪೊಲೀಸರು ಆರೋಪಿ ಪ್ರೇಮ್ ಶ್ರೀಕಾಂತ ಗದ್ದಿ (27)ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎ.ಎಸ್.ಐ ಎನ್.ಎ ಮೌಲ್ವಿ, ಎ.ಆರ್.ಎಸ್.ಐ ಗುರು ಬೂದಿಹಾಳ (ಟೆಕ್ನಿಕಲ್ ಸೆಲ್) ಎಚ್.ಸಿ ಗಳಾದ ಆರ್.ಎಸ್ ಯರಗಟ್ಟಿ, ಎಮ್.ಎ ಶೇಖ, ಎ.ಆರ್. ಕಮ್ಮಾರ, ಎಮ್.ಎಸ್ ಬಳ್ಳಾರಿ. ಸಿ.ಎಸ್ ಮಠಪತಿ, ಮತ್ತು ಪಿ.ಸಿ ಗಳಾದ ಡಿ.ಎಸ್. ನದಾಫ, ಎಚ್.ಐ ಕಲ್ಲಣ್ಣವರ. ಪಾಂಡುರಂಗರಾವ್, ಸಂಜೀವ ಕೊರಡೂರ(ಟೆಕ್ನಿಕಲ್ ಸೆಲ್) ಮಧುಚಂದ್ರ ಧಾರವಾಡ, ಸೋಮು ವಾಲ್ಮೀಕಿ. ನಂದಯ್ಯ ಮಠಪತಿ ಇವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
07/12/2024 04:40 pm