ಗದಗ : ಸತತವಾಗಿ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಸ್ಥಗಿತಗೊಂಡಿರುವ ಏರಿಯಾಗಳನ್ನೇ ಟಾರ್ಗೆಟ್ ಮಾಡುವ ಕಳ್ಳರ ತಂಡವೊಂದು ನಗರದಲ್ಲಿ ಆ್ಯಕ್ಟಿವ್ ಆಗಿದೆ.
ಹೌದು ಕರೆಂಟ್ ಇಲ್ಲದ ವೇಳೆ ಮನೆಗಳಿಗೆ ಎಂಟ್ರಿ ಕೊಡುವ ಈ ಗ್ಯಾಂಗ್ ಮನೆಯಲ್ಲಿದ್ದ ಚಿನ್ನ, ಹಣ ಕದ್ದು ಪರಾರಿಯಾಗಿದ್ದಾರೆ. ಗದಗ ನಗರದ ಹುಡ್ಕೋ ಕಾಲೋನಿಯ ದೀಪಕ್ ಪವಾರ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ.
ಮನೆ ಮಂದಿಯಲ್ಲ ಹುಬ್ಬಳ್ಳಿಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರದಿರುವುದನ್ನ ಗಮನಿಸಿದ ಖದೀಮರು ಮನೆ ಬೀಗ ಮುರಿದು ಮನೆಯಲ್ಲಿದ್ದ 120 ಗ್ರಾಂ ಚಿನ್ನಾಭರಣ, ಹಾಗೂ ಒಂದು ಲಕ್ಷ ರೂಪಾಯಿ ದೋಚಿ ಎಸ್ಕೇಪ್ ಆಗಿದ್ದಾರೆ.
ಇನ್ನು ಪವಾರ್ ಕುಟುಂಬದಲ್ಲಿ ಮದುವೆಗಾಗಿ ಆಗಾಗ ಚಿನ್ನಾಭರಣ ಖರೀದಿಸಿ ಕೂಡಿಟ್ಟಿದ್ದರು. ಆದ್ರೆ ಎಲ್ಲವನ್ನೂ ದೋಚಿ ಪರಾರಿಯಾಗಿದ್ದರು. ಅದೇ ಕಪಾಟಿನಲ್ಲಿ, ಪುಸ್ತಕದ ಕೆಳಗೆ 10 ಸಾವಿರ ರೂಪಾಯಿ ಇಟ್ಟಿದ್ದರು. ಆದ್ರೆ ಅವು ಮಾತ್ರ ಕಳ್ಳರ ಕಣ್ಣಿಗೆ ಬಿದ್ದಿಲ್ಲ. ಮರುದಿನ ಬೆಳಿಗ್ಗೆ ಪಕ್ಕದ ಮನೆಯವರು ಗಮನಿಸಿದಾಗ ಮನೆಯ ಬಾಗಿಲು ತೆರೆದಿದ್ದನ್ನು ನೋಡಿ ಮನೆಯ ಯಜಮಾನ ದೀಪಕ್ ಅವರಿಗೆ ಕರೆ ಮಾಡಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಗದಗ ನವರತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆದಷ್ಟು ಬೇಗ ನಮ್ಮ ಚಿನ್ನಾಭರಣ ಮತ್ತು ಹಣ ಪತ್ತೆ ಮಾಡಿಸಿಕೊಡಿ ಅಂತ ಮನೆಯವರು ಕಣ್ಣೀರಿಟ್ಟಿದ್ದಾರೆ.
PublicNext
14/09/2022 05:58 pm