ಮುಂಬೈ: ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್ ಮನೋಜ್ ಪಾಟೀಲ್ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾತ್ರೆಗಳನ್ನು ನುಂಗಿ ಮನೋಜ್ ಪಾಟೀಲ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡೆತ್ನೋಟ್ನಲ್ಲಿ ಕೆಲವು ದಿನಗಳಿಂದ ಬಾಲಿವುಡ್ ನಟ ಸಾಹಿಲ್ ಖಾನ್ ತನಗೆ ಕಿರುಕುಳ ನೀಡುತ್ತಿದ್ದರು. ನನ್ನ ವಿರುದ್ಧ ಅವರು ಅಪಪ್ರಚಾರ ಮಾಡುತ್ತಿದ್ದರು. ಇದರಿಂದಾಗಿ ನಾನು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಸದ್ಯಕ್ಕೆ ಮನೋಜ್ ಪಾಟೀಲ್ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಮಿಸ್ಟರ್ ಇಂಡಿಯಾ ಆಗಿದ್ದ ಮನೋಜ್ ಪಾಟೀಲ್, ಮಿಸ್ಟರ್ ಒಲಂಪಿಯಾದಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದರು. ಸಾಹಿಲ್ ಖಾನ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿದ್ದರು. ಇದರಿಂದಾಗಿ ಸಾಹಿಲ್ ತನ್ನನ್ನು ಸ್ಪರ್ಧೆಯಲ್ಲಿ ಭಾಗವಹಿಸದಿರಲು ಅಡ್ಡಿಯುಂಟು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
PublicNext
16/09/2021 02:59 pm