ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಹರಿಹರ ನಗರಸಭೆ ಆಯುಕ್ತರ ಮೇಲೆ ಹಲ್ಲೆಗೆ ಮುಂದಾದ ಶಾಸಕ ಬಿ ಪಿ ಹರೀಶ್

ದಾವಣಗೆರೆ : ಹರಿಹರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಶಾಖಾ ಕಚೇರಿ ಉದ್ಘಾಟನಾ ವೇಳೆ ಅಧಿಕಾರಿ ಮೇಲೆ ಏರಿ ಹೋದ ಶಾಸಕ ಬಿ ಪಿ ಹರೀಶ್. ಶಾಖಾ ಕಚೇರಿಯ ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ಹಾಕದಿರುವುದಕ್ಕೆ ಶಾಸಕರ ಗಲಾಟೆ ಮಾಡಿದ್ದಾರೆ.

ಹರಿಹರ ನಗರಸಭೆ ಇಲಾಖೆ ಅಧಿಕಾರಿಗೆ "ತೂ' ನಿನ್ನ ಮುಖಾ ತೋರಿಸಬೇಡ ಹೋಗು ಆ ಕಡೆ ಅಂತ ಗಲಾಟೆ ಮಾಡಿದರು ನಗರಸಭೆ ಪೌರಾಧಿಕಾರಿ ಸುಬ್ರಮಣ್ಯ ಶೆಟ್ಟಿ ಮೇಲೆ ಹಲ್ಲೆಗೆ ಮುಂದಾದ ಹರಿಹರ ಶಾಸಕ ಬಿ ಪಿ ಹರೀಶ್ ಏಯ್ ಸರಿಯಾಗಿ ಮಾತಾಡು ಅಂತೀಯ ಮುಚ್ಕೊಂಡಿರುಸಾವುಕಾರ ಮೆಚ್ಚಿಸೋಕೆ ಇದನ್ನೆಲ್ಲ ಮಾತನಾಡ್ತೀಯಾ,ನೀನು ಮತ್ತೆ ಮಾತಾನಾಡಿದ್ರೆ ಹುಷಾರು ನಡೀ ನೀನು ಆ ಕಡೆ ಹೋಗು ನನಗೆ ಮುಖ ತೋರಿಸಬೇಡ ಹೋಗು ನೀನು ಆ ಕಡೆ ಎಂದು ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಎದಿರು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಶಾಸಕ.

ಶಾಖಾ ಕಚೇರಿ ಉದ್ಘಾಟನೆ ಗೆ ಹಾಜರಾಗದೆ ವಾಪಸ್ ತೆರಳಿದ ಶಾಸಕ ಬಿ.ಪಿ ಹರೀಶ್.

Edited By : Suman K
PublicNext

PublicNext

11/11/2024 05:19 pm

Cinque Terre

18 K

Cinque Terre

0

ಸಂಬಂಧಿತ ಸುದ್ದಿ