ರಾತ್ರಿ ಸುರಿದ ಧಾರಾಕಾರ ಮಳೆಗೆ ತೆಲಸಂಗ ಗ್ರಾಮದ ತೋಟದ ವಸ್ತಿ ಜನಕ್ಕೆ ಸಂಪರ್ಕ ಕಲ್ಪಿಸುವ ದೋಣಿಹಳ್ಳದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಗ್ರಾಮಸ್ಥರು ಸಂಕಷ್ಟ ಪಡುವಂತಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ದೋಣಿ ಹಳ್ಳಕ್ಕೆ ನಿರ್ಮಿಸಿದ ತಾತ್ಕಾಲಿಕ ಸೇತುವೆ ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿದ್ದು ತೋಟದ ಕೆಲಸಕ್ಕೆ ಹೋದ ರೈತರು ಹಗ್ಗ ಹಿಡಿದು ಬರುವಂತಾಗಿದೆ.
ಶಾಸಕರ ಹುಟ್ಟೂರಾದ ತೆಲಸಂಗ ಗ್ರಾಮದಲ್ಲಿ ಕಳೆದ ವರ್ಷ ಗ್ರಾಮಸ್ಥರು ಹಾಗೂ ಶಾಲೆ ಮಕ್ಕಳು ಹಗ್ಗ ಹಿಡಿದು ಹಳ್ಳ ದಾಟುವಂತಾಗಿದ್ದು ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಗ್ರಾಮ ಪಂಚಾಯತಿ ವತಿಯಿಂದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿ ಕೈ ತೊಳೆದುಕೊಂಡಿದ್ದರು, ಆದರೆ ಇದೀಗ ನಿನ್ನೆ ಸುರಿದ ಭಾರಿ ಮಳೆಗೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದು ಮತ್ತೆ ಸ್ಥಳೀಯ ರೈತರು ಸಂಕಷ್ಟ ಪಡುವಂತಾಗಿದ್ದು ಶಾಶ್ವತ ಸೇತುವೆ ನಿರ್ಮಾಣ ಮಾಡಬೇಕೆಂದು ಶಾಸಕರಿಗೆ ಆಗ್ರಹಿಸುತ್ತಿದ್ದಾರೆ
PublicNext
30/09/2022 05:37 pm