ಬೆಳಗಾವಿ: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಮೂರು ತಿಂಗಳ ಗಂಡು ಮಗುವನ್ನು ಹೆತ್ತ ತಾಯಿಗೆ ಕೆರೆಗೆ ಎಸೆದು ಕೊಲ್ಲಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿಯಲ್ಲಿ ನಡೆದಿರುವ ಮತ್ತೊಂದು ಅಮಾನವೀಯ ಘಟನೆಗೆ ಜನರು ಬೆಚ್ಚಿಬಿದ್ದಿದ್ದಾರೆ. ಬೆಳಗಾವಿ ಕಣಬರಗಿ ಕೆರೆಯಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಹೊತ್ತಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ರಾಕ್ಷಸಿ ತಾಯಿ ಮಗುವನ್ನು ಕೆರೆಗೆ ಎಸೆದ ತಕ್ಷಣವೇ ಅಲ್ಲೆ ಇದ್ದ ಸ್ಥಳೀಯರಿಂದ ಮಗು ರಕ್ಷಣೆ ಮಾಡಿ, ಆಟೋದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಮಗುವನ್ನು ನಗರದ ಖಾಸಗಿ ಚಿಕ್ಕಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವನ್ನು ಕೆರೆಯಿಂದ ಹೊರಗೆ ತಗೆದ ಸ್ಥಳೀಯರು ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಮಗುವಿನ ಆರೋಗ್ಯ ಸ್ಥಿರವಾಗಿದೆ. ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಮಾಳಮಾರುತಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
PublicNext
15/12/2024 04:42 pm