ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಕ್ಕೇರಿ ಪಟ್ಟಣದಲ್ಲಿ ಕಳ್ಳರ ಅಟ್ಟಹಾಸ,ಕಣ್ಣು ಮುಚ್ಚಿ ಕುಳಿತ ಪೊಲೀಸರು

ಚಿಕ್ಕೋಡಿ : ಹುಕ್ಕೇರಿ ಪಟ್ಟಣದಲ್ಲಿ ಕಳ್ಳರ ಅಟ್ಟಹಾಸ ಮುಂದುವರೆದಿದೆ. ದಿನನಿತ್ಯ ಕಳ್ಳತನವಾಗುತ್ತಿದ್ದರೂ ಹುಕ್ಕೇರಿ ಪೊಲೀಸರು ಮಾತ್ರ ನಿದ್ರೆಯಲ್ಲಿದ್ದಾರೆ.

ಕಳ್ಳತನ ಪ್ರಕರಣ ದಾಖಲಾಸಿಕೊಳ್ಳಿ ಎಂದರೇ ಪೊಲೀಸ್ ಅಧಿಕಾರಿ ಕಳ್ಳತನವಾಗಲಿ ಬಿಡಿ ನಿಮಗೇನೂ ಕಡಿಮೆ ಇದೆ ಎನ್ನುವ ಉದ್ಧಟತನದ ಮಾತುಗಳನ್ನ ಹೇಳುತ್ತಿರುವುದು ದುರ್ದೈವ. ಎರಡು ದಿನಗಳ ಹಿಂದೆಯಷ್ಟೆ ಹುಕ್ಕೇರಿ ಪಟ್ಟಣದ ಕೋರ್ಟ್‌ ವೃತ್ತದಲ್ಲಿರುವ ದಿನಸಿ ಅಂಗಡಿಗೆ ಕನ್ನ ಹಾಕಿದ್ದರೂ ಘಟನೆ ಮಾಸುವ ಮುನ್ನವೇ ಇಂದು ಹುಕ್ಕೇರಿ ಪಟ್ಟಣದ ಬುದ್ಧ ಬಸವ ಅಂಬೇಡ್ಕರ ಸಹಕಾರಿ ಬ್ಯಾಂಕಿನ‌ ಶಟರ್ ಒಡೆದು ಕಳ್ಳರು ಕನ್ನ ಹಾಕಿ ಪರಾರಿಯಾಗಿದ್ದಾರೆ.

ಕಳ್ಳರನ್ನ ಹಿಡಿಯುವ ಬದಲು ಪೊಲೀಸರು ಪೊಲೀಸ್ ಠಾಣೆಯ ಸಣ್ಣ ಪುಟ್ಟ ಪ್ರಕರಣಗಳನ್ನ ಮುಗಿಸುವದರಲ್ಲಿ ಕಾಲ ಹರಣ ಮಾಡುತ್ತಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಗೆ ಪಿಐಎಸ್ ಆಗಿ ಮಹಾಂತೇಶ ಬಸ್ಸಾಪೂರ ಅಧಿಕಾರ ವಹಿಸಿದಾಗಿನಿಂದಲೂ ಇದುವರೆಗೂ ಒಂದೇ ಒಂದು ಕಳ್ಳತ‌ನ‌ ಪ್ರಕರಣ ಬೇಧಿಸುವಲ್ಲಿ ಮುಂದಾಗಿಲ್ಲ.

ಹೀಗೆ ದಿನನಿತ್ಯ ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಪೊಲೀಸರು ನಮಗೇಕೆ ಬೇಕು ಎನ್ನುವ ಮಾತು ಕೇಳಿಬರುತ್ತಿವೆ.

ಇನ್ನೂ ಬಹಳಷ್ಟು ಕಳ್ಳತನ ಪ್ರಕರಣಗಳನ್ನ ದಾಖಲಿಸಿಕೊಳ್ಳದೇ ಸಬೂಬು ಹೇಳಿ ಕಳಿಸುತ್ತಿದ್ದಾರೆ.ಹುಕ್ಕೇರಿ ಪೊಲೀಸರ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ಮಲಗಿರುವ ಇವರನ್ನು ಬಡಿದೆಬ್ಬಿಸುತ್ತಾರಾ ಎನ್ನುವದನ್ನ ಕಾಯ್ದು ನೋಡಬೇಕಿದೆ.

ಡಿ.ಕೆ‌.ಉಪ್ಪಾರ ಪಬ್ಲಿಕ್ ನೆಕ್ಸ್ಟ್ ಚಿಕ್ಕೋಡಿ

Edited By : Shivu K
PublicNext

PublicNext

15/12/2024 05:10 pm

Cinque Terre

6.43 K

Cinque Terre

0

ಸಂಬಂಧಿತ ಸುದ್ದಿ