ಬೆಳಗಾವಿ: ಬೀಮ್ಸ್ ಆಸ್ಪತ್ರೆಯಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದ್ದ ಬಾಣಂತಿ ಬಿಬಿಜಾನ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಗು ಜನನ ಆಗುತ್ತಿದ್ದಂತೆ ಮಗುವನ್ನು ಬಿಟ್ಟು ಹೋಗಿದ್ದ ಬೈಲಹೊಂಗಲ ಮೂಲದ ಬಿಬಿಜಾನ್ ಮೇಲೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾಯಿ ಪರಾರಿಯಾಗುತ್ತಿದ್ದಂತೆ ಮೂರು ದಿನಗಳ ಕಂದಮ್ಮ ತೀರಿ ಹೋಗಿತ್ತು. ಬಳಿಕ ಬಿಬಿಜಾನ್ ಪರಾರಿಯಾಗುವ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ತನಿಖೆ ಕೈಗೊಂಡಿದ್ದ ಎಪಿಎಂಸಿ ಪೊಲೀಸರು, ಈ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
ಮಗು ಸಾಕುವುದು ಕಷ್ಟ ಎಂದು ಭಾವಿಸಿ ಮಗುವನ್ನು ಬಿಟ್ಟು ಹೋಗಿದ್ದೆ. ಈಗಾಗಲೇ ಮೂವರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗು ಎಂಬ ಕಾರಣಕ್ಕೆ ಬಿಟ್ಟು ಹೋಗಿದ್ದೆ ಎಂದು ಪೊಲೀಸರ ಎದುರು ಸ್ವಇಚ್ಛೆಯಿಂದ ಬಿಬಿಜಾನ್ ಹೇಳಿಕೆ ನೀಡಿದ್ದಾಳೆ.
PublicNext
14/12/2024 09:44 pm