ಬೆಳಗಾವಿ : ಒಂದು ದೇಶ ಒಂದು ಚುನಾವಣೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರೋದಕ್ಕೆ ಕಾಂಗ್ರೆಸ್ ನಾಯಕರೆಲ್ಲ ಆಕ್ಷೇಪಿಸುತ್ತಿದ್ದಾರೆ. ಈ ಕುರಿತು ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ್ ಲಾಡ್, ಒನ್ ನೇಷನ್ ಒನ್ ಎಲೆಕ್ಷನ್ ಮಸೂದೆ ಫೇಲ್ ಆಗುತ್ತೆ ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.
ಜಿಎಸ್ ಟಿ, ಖೇಲೋ ಇಂಡಿಯಾ ಎಲ್ಲಾ ಭಾಷಣ ನೋಡಿದ್ದೇವೆ. ಈಗ ಒನ್ ನೇಷನ್ ಒನ್ ಎಲೆಕ್ಷನ್ ಮಸೂದೆ ಆದ್ರೆ ದೇಶದ ಬಡತನ ನಿರ್ಮೂಲನೆಯಾಗಲಿದೆ ಎಂದು ಪೋಸ್ಟ್ ಸ್ಟಾರ್ಟ್ ಆಗುತ್ತೆ ನೋಡಿ ಎಂದು ವ್ಯಂಗ್ಯವಾಡಿದರು. ಈ ಮಸೂದೆಯಿಂದ ರೈತರಿಗೆ ಯುವಕರಿಗೆ ಬಡವರಿಗೆ ಯಾವುದೇ ರೀತಿ ಅನುಕೂಲವಾಗುವುದಿಲ್ಲ. ಇದು ನನ್ನ ಅಭಿಪ್ರಾಯ. ಪಕ್ಷದ ನಿಲುವು ನನಗೆ ಇನ್ನೂ ಗೊತ್ತಿಲ್ಲ ಎಂದರು.
PublicNext
13/12/2024 02:12 pm