ಬೆಳಗಾವಿ ಜಿಲ್ಲೆಯೂ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ದೇಶದಲ್ಲೇ 10ನೇ ರ‍್ಯಾಂಕ್ ಪಡೆದುಕೊಂಡಿದೆ. ಅಂತಹ ಜಿಲ್ಲೆಯ ಕೇಂದ್ರ ಆಡಳಿತ ಸ್ಥಳವಾದ ಜಿಲ್ಲಾಡಳಿತ ಕಚೇರಿ ಸುತ್ತಮುತ್ತಲಿನ ರಸ್ತೆಗಳು ಸಾರ್ವಜನಿಕರಿಗೆ ಪ್ರತಿನಿತ್ಯ ಕಿರಿಕಿರಿ ಉಂಟುಮಾಡುತ್ತಿವೆ.
ಹೌದು. ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜನರಿಗೆ ತೊಂದರೆ ಆಗುತ್ತಿದೆ. ಇದೇ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾ ನ್ಯಾಯಾಲಯ, ನೋಂದಣಿ ಕಚೇರಿ, ಕೇಂದ್ರ ಗ್ರಂಥಾಲಯ, ನಾಡ ಕಚೇರಿ ಸೇರಿದಂತೆ ಹಲವಾರು ಕಚೇರಿಗಳಿವೆ. ಈ ಕಚೇರಿಗಳಿಗೆ ಪ್ರತಿನಿತ್ಯ ಸಾವಿರಾರು ಜನರು ಓಡಾಟ ನಡೆಸುವುದು ಸಹಜ, ಆದ್ರೆ ಹಾಳಾದ ರಸ್ತೆಯಿಂದ ಜನ ಬೆಸತ್ತಿದ್ದಾರೆ.
ಪ್ರತಿ ನಿತ್ಯ ಹಿರಿಯ ಅಧಿಕಾರಿಗಳಿಗೆ ಸಂಚರಿಸುವ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲಿನ ರಸ್ತೆಗಳೆ ಹಾಳಾಗಿದ್ದು, ಉಳಿದಿರುವ ರಸ್ತೆಗಳು ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ ಎಂದು ಜನ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಅಥವಾ ಸಂಭಂದಿಸಿದ ಅಧಿಕಾರಿಗಳು ಈ ರಸ್ತೆಗಳನ್ನು ಸರಿಪಡಿಸಲು ಜನ ಆಗ್ರಹಿಸಿದ್ದಾರೆ.
PublicNext
26/09/2022 04:56 pm