ಬೆಳಗಾವಿ: ಗಡಿಭಾಗ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನೇರಿ ಮಠದಲ್ಲಿ ಸಂತ ಸಮಾವೇಶ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ರು.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಭಕ್ತರು, ಹಾಗೂ ವಿವಿಧ ಮಠದ ಸ್ವಾಮೀಜಿಗಳು
ಸೇರಿದಂತೆ ಸಚಿವರಾದ ಗೋವಿಂದ್ ಕಾರಜೋಳ, ಶಂಕರ್ ಪಾಟೀಲ್ ಮುನೇನಕೊಪ್ಪ, ವಿ.ಸೋಮಣ್ಣ, ಮುರಗೇಶ್ ನಿರಾಣಿ, ಸಿ.ಸಿ ಪಾಟೀಲ್, ಶಶಿಕಲಾ ಜೊಲ್ಲೆ ಹಾಗೂ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಸಚಿವ ಪ್ರಹ್ಲಾದ ಜೋಶಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದೆ ವೇಳೆ ಮಾತನಾಡಿದ ಸಿಎಂ, ಇಲ್ಲಿ ಪ್ರಥಮ ಬಾರಿ ಬರ್ತಿದ್ದೇನೆ, ಭಕ್ತಿ ಭಾವ ಕಾರ್ಯಕ್ರಮ ಮಠದ ಸೇವೆ ನೋಡಿದಾಗ ಇದು ಆದರ್ಶ ಮಠ ಅನಿಸುತ್ತೆ. ಆದರ್ಶ ಮಠ ಆಗಲು ತನ್ನದೇ ಆದ ಆದರ್ಶ ಇರಬೇಕು. ಬೇರೆ ದೇಶಕ್ಕೂ ನಮಗೂ ಇರುವ ವ್ಯತ್ಯಾಸ ನಮ್ಮ ಸಂಸ್ಕೃತಿ, ಸಂಸ್ಕಾರ ಅದು ನಮ್ಮ ದೇಶದ ಮಠ ಮಂದಿರಗಳಲ್ಲಿ ಸಿಗುತ್ತದೆ ಎಂದಿದ್ದಾರೆ.
ಇನ್ನು ಕನ್ನೇರಿ ಮಠದ ದೊಡ್ಡ ಮಠ ಕರ್ನಾಟಕದಲ್ಲಿಯೂ ಸ್ಥಾಪನೆ ಮಾಡಿ ಅದಕ್ಕೆ ಸಂಪೂರ್ಣ ಸಹಕಾರ, ಜಾಗ ಸರ್ಕಾರದ ವತಿಯಿಂದ ಒದಗಿಸುವುದು ಕನ್ನೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮೂರು ಕೋಟಿ ನೀಡಿದ್ದು ಕೆಲಸ ಪ್ರಾರಂಭ ಮಾಡಿ ಮುಂಬರುವ ದಿನಗಳಲ್ಲಿ ಕರ್ನಾಟಕ ಭವನದೊಳಗಿನ ಕೆಲಸ ಕಾರ್ಯಕ್ಕೆ ಎರಡು ಕೋಟಿ ನೀಡ್ತೇನೆ ಎಂದು ಘೋಷಣೆ ಮಾಡಿದ್ದಾರೆ.
Kshetra Samachara
10/10/2022 09:06 pm