ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 'ತಾಕತ್ತಿದ್ರೆ, ಬಿಜೆಪಿಗೆ ವಲಸೆ ಬರುತ್ತಿರುವ ಕಾಂಗ್ರೆಸ್ ಶಾಸಕರನ್ನ ತಡೆಯಿರಿ'; ಸವದಿ ಸವಾಲ್‌

ಅಥಣಿ: ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ತಾಕತ್ತು, ದಮ್ಮ ಇದ್ದರೆ, ಬಿಜೆಪಿ ಪಕ್ಷಕ್ಕೆ ವಲಸೆ ಬರುತ್ತಿರುವ ಕಾಂಗ್ರೆಸ್ ಶಾಸಕರನ್ನು ತಮ್ಮ ಪಕ್ಷದಲ್ಲಿಯೆ ಇಟ್ಟುಕೊಳ್ಳಿ, ನಿಮ್ಮಲ್ಲಿ ದಮ್ಮ ಇದ್ದರೆ ಅವರನ್ನು ತಡೆಯಿರಿ ಎಂದು ಕಾಂಗ್ರೆಸ್ ನಾಯಕರಿಗೆ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಸವಾಲು ಹಾಕಿದ್ದಾರೆ.

ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಹಾಗೂ ಮೋದಿ ತಾಕತ್ತು ನೊಡಿ, ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷಕ್ಕೆ ಬರುತ್ತಿದ್ದಾರೆ, ದೇಶ ದೇಶಗಳ ಮಧ್ಯದ ಯುದ್ದವನ್ನು ನಿಲ್ಲಿಸಿ ಅಲ್ಲಿನ ಜನರನ್ನು ಸುರಕ್ಷಿತವಾಗಿ ಮರಳಿ ಭಾರತಕ್ಕೆ ತಂದು ತೋರಿಸಿದ್ದು ಮೋದಿಯವರ ತಾಕತ್ತು ನಮ್ಮ ದೇಶದ ತಾಕತ್ತು ಎಂದ್ರು.

ಮುಂದುವರೆದು ಮಾತನಾಡಿ ಕಾಗವಾಡ ಮತಕ್ಷೇತ್ರದಲ್ಲಿ ಸ್ವತಃ ನನ್ನ ಮಗನೇ ಬಂದು ಚುನಾವಣೆಗೆ ನಿಂತರೂ ನಾನು ಬಿಜೆಪಿಗಿನೆ ಸಪೋರ್ಟ್ ಮಾಡೋದು, ವೇದಿಕೆ ಮೇಲೆ ಆಸೀನರಾದ ನಮಗೆಲ್ಲರಿಗಿಂತ ದೇಶ ಮತ್ತು ಪಕ್ಷ ದೊಡ್ಡದು ನಾವ್ಯಾರು ದೊಡ್ಡವರಲ್ಲ ಎಂದರು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ‌ಕುಮಾರ ಕಟೀಲ್, ಶಾಸಕರಾದ ಶ್ರೀಮಂತ ಪಾಟೀಲ, ಪಿ ರಾಜೀವ, ಮಹೇಶ ಕುಮಠಳ್ಳಿ, ಸಂಸದ ಅಣ್ಣಾಸಾಬ ಜೊಲ್ಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

28/09/2022 05:10 pm

Cinque Terre

25.2 K

Cinque Terre

0

ಸಂಬಂಧಿತ ಸುದ್ದಿ