ಅಥಣಿ : ಅಕ್ಟೋಬರ್ 7ರಂದು ನಡೆಯಲಿರುವ ಅಥಣಿಯ ಅಂಜುಮನ್ ಎ ಇಸ್ಲಾಂ ಕಮಿಟಿಯ ಹದಿನೈದು ಸದಸ್ಯ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಇದುವರೆಗೆ ಒಟ್ಟು 61 ನಾಮಪತ್ರ ಸಲ್ಲಿಕೆಯಾಗಿದ್ದು ಎರಡು ಸಾವಿರದ ಮುನ್ನೂರಕ್ಕೂ ಅಧಿಕ ಮತದಾರರು ಅಂಜುಮನ್ ಎ ಇಸ್ಲಾಂ ಕಮಿಟಿಗೆ ಹದಿನೈದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ.
ಅಥಣಿ ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮಿಟಿ ಸದಸ್ಯ ಸ್ಥಾನಕ್ಕೆ ಇಂದು ಅಥಣಿ ಮುಸ್ಲಿಂ ಸಮಾಜದ ಹದಿನೈದು ಯುವಕರು ಒಟ್ಟಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದು ವಿಶೆಷವಾಗಿತ್ತು.
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ನ್ಯಾಯವಾದಿ ಮೊಸಿನ ಮುಜಾಹಿದ್ ಮಾತನಾಡಿ 2006 ರಿಂದ ಇಲ್ಲಿಯವರೆಗೆ ಅಂಜುಮನ್ ಎ ಇಸ್ಲಾಂ ಅಥಣಿ ಕಮಿಟಿಯ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿಲ್ಲಾ ಹಿಂದೆ ಇದ್ದ ಸದಸ್ಯರೆ ಕಮಿಟಿಯನ್ನು ಮುಂದುವರೆಸಿಕೊಂಡು ಬಂದಿದ್ದರು ಆದರೆ ಈ ಬಾರಿ ಯುವಕರ ತಂಡ ಚುನಾವಣೆ ನಡೆಸುವಂತೆ ಪಟ್ಟು ಹಿಡಿದ ಪರಿಣಾಮ ಸರ್ಕಾರದ ಅದಿನದಡಿ ಚುಣಾವಣೆ ನಡೆಸಲಾಗುತ್ತಿದ್ದು ಶಿಕ್ಷಣ ಮತ್ತು ಪ್ರಗತಿಪರ ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು ಈ ಚುಣಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ತಿಳಿಸಿದರು.
ಈ ವೇಳೆ ಆಸಿಫ್ ತಾಂಬೊಳಿ, ಅತಿಕ ಮೋಮಿನ್, ಸಾಜಿದ್ ಗದ್ಯಾಳ, ಹಾಜಿಉಮರ್ ನಾಲಬಂದ, ಖಲೀಲ ಮುಲ್ಲಾ, ಇಮ್ರಾನ್ ಸಾತಬಚ್ಚೆ, ಜಾಹಾಂಗಿರ ಮುಕ್ಕೆರಿ, ಅಶಪಾಕ್ ಮುಲ್ಲಾ, ಫಯಾಜ ಪಠಾಯಿತ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
28/09/2022 10:56 am