ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಉಮೇಶ್ ಕತ್ತಿ ಸ್ಥಾನ ತುಂಬುವ ನಾಯಕ ಯಾರು? ರಾಜ್ಯಸಭಾ ಸದಸ್ಯ ಕಡಾಡಿ ಹೇಳಿದ್ದೇನು?

ಸಚಿವ ಉಮೇಶ ಕತ್ತಿರವರ ನಿಧನದಿಂದ ಅವರ ಸ್ಥಾನವನ್ನು ತುಂಬುವ ನಾಯಕರು ಯಾರು ಎಂಬ ಪ್ರಶ್ನೆ ಈಗ ಸ್ವಾಭಾವಿಕವಾಗಿ ಎಲ್ಲರಲ್ಲಿಯೂ ಇದೆ. ಈ ಕುರಿತಂತೆ ಈಗಾಗಲೇ ಅನೇಕ ನಾಯಕರ ಹೆಸರುಗಳು ಕೇಳಿಬಂದಿದ್ದು, ಈ ಕುರಿತಂತೆ ಪಕ್ಷದ ವೇದಿಕೆ ಮೇಲೆ ಯಾವುದೇ ಚರ್ಚೆಯಾಗಿಲ್ಲ ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಳಗಾವಿ ರಾಜಕೀಯವಾಗಿ ದೊಡ್ಡ ಜಿಲ್ಲೆ, ಇಲ್ಲಿ 18 ವಿಧಾನಸಭಾ ಕ್ಷೇತ್ರಗಳು ಮತ್ತು 2 ಲೋಕಸಭಾ ಇವೆ. ಇದರಿಂದಾಗಿ ಸಹಜವಾಗಿ ಉಮೇಶ್ ಕತ್ತಿಯವರ ಸ್ಥಾನವನ್ನು ಯಾರು ತುಂಬುತ್ತಾರೆ ಅನ್ನೋದು ಸಹಜವಾಗಿ ಚರ್ಚೆ ನಡೆಯುತ್ತಿವೆ.

ಆದರೂ ಬಿಜೆಪಿ ಪಕ್ಷದಲ್ಲಿ ಆಯಾ ಕ್ಷೇತ್ರಗಳ ಜವಾಬ್ದಾರಿ ಹೊತ್ತುಕೊಂಡು ಹೋಗುವ ಸಮರ್ಥ ನಾಯಕರು ನಮ್ಮಲ್ಲಿದ್ದಾರೆ. ಸದ್ಯ ಜಿಲ್ಲೆಯ ಎಲ್ಲ ನಾಯಕರು ಈ ಕೊರತೆಯನ್ನು ನೀಗಿಸಿಕೊಂಡು ಮುಂದೆ ಹೋಗುವ ಜವಾಬ್ದಾರಿ ಇದೆ. ಹುಕ್ಕೇರಿ ಕ್ಷೇತ್ರದಲ್ಲಿ ಸಮರ್ಥ ನಾಯಕರು ಯಾರು ಅನ್ನೊದನ್ನ ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಈರಣ್ಣಾ ಕಡಾಡಿ ತಿಳಿಸಿದರು.

Edited By :
Kshetra Samachara

Kshetra Samachara

13/09/2022 04:37 pm

Cinque Terre

14.46 K

Cinque Terre

0

ಸಂಬಂಧಿತ ಸುದ್ದಿ