ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಔಟ್ ಆಗಿದ್ದು ನಿಜಾನಾ ಸುಳ್ಳಾ..? ಕುಟುಂಬಸ್ಥರು ಹೇಳೋದು ಏನು...?

ಬಿಗ್ ಬಾಸ್ ಸ್ಪರ್ಧಿಯಾಗಿ ಸೀಜನ್ 11ಕ್ಕೆ ದೊಡ್ಮನೆಗೆ ಎಂಟ್ರಿ ಕೊಟ್ಟ ಉತ್ತರ ಕರ್ನಾಟಕದ ಗೋಲ್ಡ್ ಸುರೇಶ್ ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ರಾಜ್ಯದಲ್ಲಿ ಸದ್ದು ಮಾಡಿದೆ.

ಕ್ಯಾಪ್ಟನ್ ಆಗಿ ಬಿಗ್ ಬಾಸ್ ಮನೆಯಲ್ಲಿ ಖುಷಿಯಾಗಿದ್ದ ಗೋಲ್ಡ್ ಸುರೇಶ್ ದಿಢೀರ್ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಸಸ್ಪೆನ್ಸ್ ಜೊತೆಗೆ ಗೋಲ್ಡ್ ಸುರೇಶ್ ಹೊರ ಬಂದಿದ್ದು, ಮನೆಯ ಸದಸ್ಯರಿಗೆ ಬಿಗ್ ಬಾಸ್ ಒಂದು ಮಹತ್ವದ ಅನೌನ್ಸ್​ಮೆಂಟ್ ಮಾಡಿದ್ದು, ಸುರೇಶ್ ಅವರ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ ಎಂಬ ಮಾತಿನ ಮೂಲಕ ಸಂದೇಶ ಸಾರಿದ ಬಿಗ್ ಬಾಸ್ ಮಾತಿಗೆ ಆಘಾತಗೊಂಡ ಸುರೇಶ್ ಸೇರಿ ಇನ್ನೂಳಿದ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.

ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕುಟುಂಬ ಸದಸ್ಯರೇ ಶಾಕ್ ಆಗಿದ್ದು, ಸುರೇಶ್ ತಂದೆ ಆರೋಗ್ಯದಲ್ಲಿ ಏರುಪೇರು ಆಗಿರುವ ವದಂತಿ ಹಬ್ಬಿರುವ ಹಿನ್ನೆಲೆ ಅಥಣಿ ತಾಲೂಕಿನ ಪ್ರಾರ್ಥನೆ ಗ್ರಾಮಕ್ಕೆ ಭೇಟಿ ನೀಡಿದ ಪಬ್ಲಿಕ್ ನೆಕ್ಸ್ಟ್ ತಂಡ ಕುಟುಂಬದ ಜೊತೆ ಮಾತನಾಡಿ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಕಲೆಹಾಕಿ ನಿಮ್ಮ ಮುಂದೆ ಇಟ್ಟಿದೆ.

Edited By : Shivu K
PublicNext

PublicNext

15/12/2024 08:13 pm

Cinque Terre

21.87 K

Cinque Terre

1