ಅಥಣಿ : ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಮುದಾಯ ಸಂಬಂಧಿಸಿದ ಉಪಜಾತಿಗಳ ಒಳ ಮೀಸಲಾತಿ ಜಾರಿಗಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಿ ಮಾದಿಗ ಸಮಾಜದ ಪರವಾಗಿ ಮಾತನಾಡಬೇಕೆಂದು ಆಗ್ರಹಿಸಿ ಶಾಸಕ ಲಕ್ಷ್ಮಣ ಸವದಿ ಅವರ ಪರವಾಗಿ ಚಿದಾನಂದ ಸವದಿ ಅವರಿಗೆ ಮಾದಿಗ ಮೀಸಲಾತಿ ಹೋರಾಟಗಾರರು ಮನವಿ ಸಲ್ಲಿಸಿದರು.
ಮಾದಿಗ ಮಿಸಲಾತಿ ಹೋರಾಟ ಸಮಿತಿ ವತಿಯಿಂದ ಶಾಸಕ ಲಕ್ಷ್ಮಣ ಸವದಿ ಅವರ ಮನೆ ಮುಂದೆ ತಮಟೆ ಚಳುವಳಿಯ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಮುಖಂಡ ಹಣಮಂತ ಅರ್ಧಾವೂರ ಅವರು ಮಾತನಾಡಿ ಮಾದಿಗ ಸಮುದಾಯ ಮತ್ತು ಅದರ ಸಂಬಂಧಿಸಿದ ಉಪಜಾತಿಗಳ ಒಳ ಮೀಸಲಾತಿ ಹೋರಾಟವು ಮೂರು ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದು ಇದೆ ಎಂದರು.
ಅನಂತರ ಮುಖಂಡ ರಾಜೇಂದ್ರ ಐಹೊಳೆ, ಸುನೀತಾ ಐಹೊಳೆ ಅವರು ಮಾತನಾಡಿದರು, ಕುಮಾರ ಗಸ್ತಿ, ಸುಕುಮಾರ ಮೋಳೆಕರ, ರಾಜು ರಾಜಂಗಳೆ, ಸದಾಶಿವ ದೊಡಮನಿ ಸೇರಿದಂತೆ ಅನೇಕರಿದ್ದರು.
Kshetra Samachara
14/12/2024 09:38 pm