ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : "ಮಾದಿಗರ ಪರವಾಗಿ ಸದನದಲ್ಲಿ ಧ್ವನಿ ಎತ್ತಿ"- ತಮಟೆ ಬಾರಿಸಿ ಮನವಿ

ಅಥಣಿ : ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಮುದಾಯಕ್ಕೆ ಸಂಬಂಧಿಸಿದ ಉಪಜಾತಿಗಳ ಒಳ ಮೀಸಲಾತಿ ಜಾರಿಗಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಿ ಮಾದಿಗ ಸಮಾಜದ ಪರವಾಗಿ ಮಾತನಾಡಬೇಕೆಂದು ಆಗ್ರಹಿಸಿ ಶಾಸಕ ಲಕ್ಷ್ಮಣ ಸವದಿ ಪರವಾಗಿ ಚಿದಾನಂದ ಸವದಿ ಅವರಿಗೆ ಮಾದಿಗ ಮೀಸಲಾತಿ ಹೋರಾಟಗಾರರು ಮನವಿ ಸಲ್ಲಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಶಾಸಕ ಲಕ್ಷ್ಮಣ ಸವದಿ ಮನೆ ಮುಂದೆ ತಮಟೆ ಚಳುವಳಿಯ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಮುಖಂಡ ಹಣಮಂತ ಅರ್ಧಾವೂರ, ಮಾದಿಗ ಸಮುದಾಯ ಮತ್ತು ಸಂಬಂಧಿಸಿದ ಉಪಜಾತಿಗಳ ಒಳ ಮೀಸಲಾತಿ ಹೋರಾಟವು ಮೂರು ದಶಕಗಳಿಂದಲೂ ನಡೆಯುತ್ತಾ ಬಂದಿದೆ ಎಂದರು.

ಅನಂತರ ಮುಖಂಡ ರಾಜೇಂದ್ರ ಐಹೊಳೆ, ಸುನೀತಾ ಐಹೊಳೆ ಮಾತನಾಡಿದರು. ಕುಮಾರ ಗಸ್ತಿ, ಸುಕುಮಾರ ಮೋಳೆಕರ, ರಾಜು ರಾಜಂಗಳೆ, ಸದಾಶಿವ ದೊಡಮನಿ ಉಪಸ್ಥಿತರಿದ್ದರು.

Edited By : Nagesh Gaonkar
PublicNext

PublicNext

15/12/2024 07:32 am

Cinque Terre

5.48 K

Cinque Terre

0

ಸಂಬಂಧಿತ ಸುದ್ದಿ