ಸವದತ್ತಿ : ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕ ಹಾಗೂ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಚನೈನಲ್ಲಿ ಅಫೋಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.ಹಲವು ದಿನಗಳಿಂದ ತೀವೃವಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಶಾಸಕ ಆನಂದ ಮಾಮನಿ ಅವರನ್ನು ಇತ್ತೀಚೆಗೆ ಚನೈನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಆಗಿದ್ದಾರೆ. ಈಗಾಗಲೇ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಿದ್ದು ಉಪ ಸಭಾಪತಿಯಾಗಿರುವ ಇವರು ಗೈರಾಗಿದ್ದಾರೆ.
ಸದ್ಯ ಅವರ ಆಪ್ತವಲಯದ ಮೂಲಗಳ ಪ್ರಕಾರ ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ನಾಳೆ ಅಥವಾ ನಾಡಿದ್ದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಶೀಪ್ಟ್ ಆಗುತ್ತಾರೆ ಎಂದು ತಿಳಿದು ಬಂದಿದೆ.ಒಟ್ಟಿನಲ್ಲಿ ಬೆಳಗಾವಿ ಪ್ರಮುಖ ನಾಯಕರ ಮೇಲೆ ಒಂದಿಲ್ಲೊಂದು ಹೊಡೆತ ಬೀಳುತ್ತಿದ್ದು, ಆನಂದ ಮಾಮನಿ ಅವರ ಆರೋಗ್ಯ ಸುಧಾರಿಸಲೆಂಬುದು ಜನರ ಪ್ರಾರ್ಥನೆಯಾಗಿದೆ.
PublicNext
15/09/2022 07:35 am