ಕಳೆದ ಎರಡು ದಿನಗಳಿಂದ ಸವದತ್ತಿ ಶಾಸಕ ಹಾಗೂ ಡೆಪ್ಯುಟಿ ಸ್ಪೀಕರ್ ಆಗಿರುವ ಆನಂದ ಮಾಮನಿ ಅವರ ಆರೋಗ್ಯದ ಕುರಿತು ಸೋಷಿಯಲ್ ಮೀಡಿಯಾದ ಸೇರಿದಂತೆ ಹಲವೆಡೆ ಗುಮಾನಿ ಚರ್ಚೆಗಳು ಹರಿದಾಡುತ್ತಿದ್ದವು.
ಕಳೆದ ಎರಡು ದಿನಗಳ ಹಿಂದೆ ಅವರು ತೀವ್ರವಾದ ಅನಾರೋಗ್ಯದಿಂದಾಗಿ ಚನೈ ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಏತನ್ಮಧ್ಯೆ ಅವರು ಅಧಿವೇಶನ ಕಾರ್ಯಕಲಾಪಗಳಿಗೆ ಕೂಡಾ ಗೈರಾಗಿದ್ದರು.
ಈ ಹಿನ್ನಲೆಯಲ್ಲಿ ಅವರ ಆರೋಗ್ಯ ತೀರ ಹದೆಗಟ್ಟಿದೆ, ಹಾಗೆ ಹೀಗೆ, ಎಂಬ ಹರಿದಾಡುತ್ತಿದ್ದ ವದಂತಿಗಳಿಗೆ ಪುಷ್ಠಿ ಸಿಕ್ಕಿತ್ತು. ಆದರೆ ಇದೀಗ ಆ ಎಲ್ಲ ವದಂತಿಗಳಿಗೆ ಸ್ವತಃ ಅವರೇ ವಿಡಿಯೋ ಹೇಳಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.
PublicNext
15/09/2022 02:41 pm