ಬೆಳಗಾವಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕದ ನೇತೃತ್ವದಲ್ಲಿ ತಾಲೂಕಿನ ಜನರ ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಿನಿ ವಿಧಾನಸೌಧದ ಎದುರಿಗೆ ಪ್ರತಿಭಟಿಸಿದ ಪ್ರತಿಭಟನಾಕಾರರು ರೈತ ಗ್ರಾಹಕರ ವಿರೋಧಿ ವಿದ್ಯುತ್ ತಿದ್ದುಪಡಿ ಮಸೂದೆ ಕಾಯ್ದೆಯನ್ನು ಜಾರಿಗೆ ತರಬಾರದು, ಕಾನೂನು ಬಾಹಿರವಾಗಿ ಭೂಸ್ವಾದಿನ ಪಡಿಸಿಕೊಂಡ ಜಮೀನಿನ ಸಮಸ್ಯೆಯನ್ನು ಬಗೆಹರಿಸಬೇಕು, ಮಳೆ ಹಾನಿ ಪರಿಹಾರ, ಬೆಳೆಗಳಿಗೆ ನಿರಂತರ ಖರೀದಿ ಕೇಂದ್ರ ತೆಗೆಯುವುದು, ಕಬ್ಬಿನ ಬಾಕಿ ಬಿಲ್ ಹಾಗೂ ಒಂದು ಟನ್ ಕಬ್ಬಿಗೆ 5000 ರೂಪಾಯಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಈ ವರ್ಷ ಅಪಾರ ಪ್ರಮಾಣದ ಮಳೆಯಾಗಿ 9 ಲಕ್ಷ ಹೆಕ್ಟೇರ್ ಬೆಳೆ ಹಾನಿ ಸೇರಿದಂತೆ ರೈತರಿಗೆ ತಾಲೂಕಿನ ಜನರಿಗೆ 5000 ಕೋಟಿ ರೂಪಾಯಿ ನಷ್ಟವಾಗಿದೆ ಮತ್ತು 150 ಜನ ಸೇರಿದಂತೆ ಸಾವಿರಾರು ಜಾನುವಾರಗಳು ಅಸುನೀಗಿವೆ. ಮನೆಗಳು ಕುಸಿದು ಬಿದ್ದಿವೆ ಹಾಗೂ 2019ರಲ್ಲಿ ಬಂದ ಪ್ರವಾಹದ ಪರಿಹಾರ ಬಂದಿಲ್ಲ. ಆದ್ದರಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಇದೆ ವೇಳೆ ಪರಿಹಾರಕ್ಕಾಗಿ ರೈತರು ಕಣ್ಣೀರು ಹಾಕಿದ ದೃಶ್ಯ ಕಂಡು ಬಂದಿತು.
PublicNext
12/09/2022 09:01 pm