ಬೆಳಗಾವಿ: ಹಳೆಯ ವೈಷಮ್ಯ ಹಿನ್ನಲೆ ಎರಡು ಗ್ಯಾಂಗ್ ನಡುವೆ ಮಾರಾಮಾರಿ ನಡೆದು, ಇಬ್ಬರ ಯುವಕರ ಭೀಕರ ಕೊಲೆಯಾಗಿದೆ.
ಗುರುವಾರ ತಡರಾತ್ರಿ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಎರಡು ಗ್ಯಾಂಗ್ ನಡುವೆ ಮಾರಾಮಾರಿ ನಡೆದು
ಮಾರಾಮಾರಿಯಲ್ಲಿ ಸುಳೇಭಾವಿ ಗ್ರಾಮದ ಪ್ರಕಾಶ್ ಹುಂಕ್ರಿಪಾಟೀಲ್(22), ಮಹೇಶ್ ಮುರಾರಿ(28) ಬರ್ಬರ ಹತ್ಯೆಗೀಡಾಗಿದ್ದಾರೆ.
ಕೊಲೆ ನಡೆದ ಕೂಡಲೇ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಹಳೆ ವೈಷಮ್ಯ ಹಿನ್ನೆಲೆ ಎರಡು ಗ್ಯಾಂಗ್ ನಡುವೆ ಗಲಾಟೆ ನಡೆದಿದ್ದು ಗಲಾಟೆ ವೇಳೆ ಇಬ್ಬರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು
ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಿಂದ ಹೆಚ್ಚಿನ ಮಾಹಿತಿ ದೊರಕಲಿದೆ.
PublicNext
07/10/2022 10:06 am