ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ವಿರೋಧದ ನಡುವೆಯೂ ಆನ್‌ಲೈನ್‌ ಮೀಟಿಂಗ್ ನಡೆಸಿದ ಕೃಷ್ಣ ಸಕ್ಕರೆ ಕಾರ್ಖಾನೆ

ಅಥಣಿ: ಕೃಷ್ಣಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ರೈತರ ವಿರೋಧ ನಡುವೆಯೂ ಆನ್‌ಲೈನ್‌ನಲ್ಲಿ ಕಾರ್ಖಾನೆಯ ಸರ್ವಸಾಧಾರಣ ಸಭೆ ನಡೆಸಿ, ರೈತರ ಅಸಮಾಧಾನಕ್ಕೆ ಗುರಿಯಾಗಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕು ಕಾರಣದಿಂದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು ಸಾಮಾಜಿಕ ಜಾಲತಾಣಗಳ ಸಹಾಯದಿಂದ ಆನ್‌ಲೈನ್ ಸಭೆ ನಡೆಸಲಾಯಿತು. ಆದರೆ ಈ ವರ್ಷ ಕೊರೊನಾ ಭಯ ಇಲ್ಲದೆ ಇದ್ದರೂ ಆನ್‌ಲೈನ್ ಮೀಟಿಂಗ್ ಮಾಡಿರುವುದು ಕೆಲವು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಹಲವು ರೈತ ಸಂಘಟನೆಗಳು, ರಾಜಕೀಯ ಪ್ರಮುಖರು ಆನ್‌ಲೈನ್ ಸಭೆ ಬೇಡ ಎಂದು ಮುಂಚಿತವಾಗಿ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಆದರೂ ಕಾರ್ಖಾನೆ ಅಧ್ಯಕ್ಷರು ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಕಾರ್ಖಾನೆ ಸರ್ವ ಸಾಧಾರಣ ಸಭೆಯನ್ನು ನಡೆಸಿದ್ದಾರೆ.

ಕಾರ್ಖಾನೆ ಆಡಳಿತ ಮಂಡಳಿಯಲ್ಲಿ ಆಗಿರುವ ಭ್ರಷ್ಟಾಚಾರ ಮುಚ್ಚಿಡಲು ಕದ್ದುಮುಚ್ಚಿ ಆನ್‌ಲೈನ್ ಮೀಟಿಂಗ್ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಹಾಗೂ ಇಂಚಗೇರಿ ಸಾಂಪ್ರದಾಯಕ ಗುರುಗಳಾದ ಶಶಿಕಾಂತ ಪಡಸಲಗಿ ಅವರು ಕಾರ್ಖಾನೆ ಆಡಳಿತ ಮೇಲೆ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

24/09/2022 10:28 am

Cinque Terre

21.76 K

Cinque Terre

0

ಸಂಬಂಧಿತ ಸುದ್ದಿ