ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಳೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ರಾಜಧಾನಿಯ ಜನರಿಂದ ಹೂವು ಹಣ್ಣುಗಳ ಖರೀದಿಯ ಭರಾಟೆ....

ಬೆಂಗಳೂರು: ನಾಳೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಅದ್ದೂರಿ ಆಚರಣೆಗೆ ಸಿಲಿಕಾನ್ ಸಿಟಿ ಜನರು ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿದ್ದರೂ ನಗರದ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಬೆಲೆ ಏರಿಕೆಯ ನಡುವೆಯೂ ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಇಂದು ಬೆಳಿಗ್ಗೆಯಿಂದಲೇ ಜನರು ಸಿಟಿ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ಸೇರಿದಂತೆ ಇತರ ಪ್ರಮುಖ ಮಾರುಕಟ್ಟೆಗಳಲ್ಲಿ ಜಮಾಯಿಸಿದ್ದಾರೆ.

ಮಾರುಕಟ್ಟೆಗಳಲ್ಲಿ ಭಾರಿ ಜನಸಂದಣಿ ಕಂಡು ಬಂದಿದ್ದು, ಕೆ.ಆರ್ ಮಾರುಕಟ್ಟೆ ಮತ್ತು ಸುತ್ತ ಮುತ್ತ ಜನರು ಜಮಾಯಿಸಿದ್ದರಿಂದ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಉಂಟಾಗಿದೆ.

ಶೇಕಡ 50 ರಷ್ಟು ಬೆಲೆ ಹೆಚ್ಚಳ:

ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣು ಮತ್ತು ಪೂಜಾ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದ್ದರೂ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಈ ಬಾರಿ ಹೂ, ಹಣ್ಣುಗಳ ಬೆಲೆ ಶೇ. 40 ರಿಂದ 50 ರಷ್ಟು ಹೆಚ್ಚಳವಾಗಿದೆ. ಸೇವಂತಿಗೆ ಪ್ರತಿ ಕೆಜಿಗೆ 400 ರೂ ಗುಲಾಬಿ ಹೂ ಕೆಜೆ 410 ರೂ ಗೆ ತಲುಪಿದೆ.

ಬೆಲೆ ಏರಿಕೆಗೆ ಜನರು ಡೊಂಟ್ ಕೇರ್:

ಹಣ್ಣುಗಳ ದರವು ಗಗನಕ್ಕೇರಿದ್ದು ಪ್ರತಿ ಕೆಜಿ ಬಾಳೆಹಣ್ಣು 120 ರೂ, ಆರೆಂಜ್ 220 ರೂ ಸೇಬು 320 ರೂ ಗೆ ಮಾರಾಟವಾಗುತ್ತಿದೆ ಆದರೂ ಹಬ್ಬವನ್ನು ಸಡಗರದಿಂದ ಆಚರಿಸಲು ಬೆಲೆ ಏರಿಕೆಯ ನಡುವೆಯೂ ಮುಂದಾಗಿದ್ದಾರೆ.

Edited By :
PublicNext

PublicNext

04/08/2022 09:00 pm

Cinque Terre

29.88 K

Cinque Terre

0

ಸಂಬಂಧಿತ ಸುದ್ದಿ