ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿಯಲ್ಲಿ ಒಂದು ದಿನ ಮೊದಲೇ ಬಕ್ರೀದ್ ಆಚರಣೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಮುಸಲ್ಮಾನರು ಬಕ್ರೀದ್ ಹಬ್ಬವನ್ನು ಒಂದು ದಿನ ಮುಂಚಿತವಾಗಿ ಆಚರಿಸಿದರು. ಸಂಭ್ರಮ, ಸಡಗರದಿಂದ ದೇವನಹಳ್ಳಿಯ ಜಾಮೀಯ ಅಹಲೇ ಅಹದೀಸ್ ಮಸೀದಿಯಲ್ಲಿ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿ ಆಚರಿಸಿದರು.

ಟಿಪ್ಪುಕಾಲದ ಪುರಾತನ ಇತಿಹಾಸದ ಮಸೀದಿಲಿ ಸಾಮೂಹಿಕವಾಗಿ ಮುಸ್ಲಿಂಸಮುದಾಯ ಬಕ್ರೀದ್ ಹಬ್ಬಕ್ಕಿಂತ ಒಂದು ದಿನ ಮುಂಚಿತವಾಗಿ ಮಾಡುತ್ತಿರುವ ಹಬ್ಬ ಇದಾಗಿದೆ. ನಾಳೆ ದೇಶದ್ಯಾಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬ ಆಚರಿಸಲಿದ್ದಾರೆ. ಹಬ್ಬವನ್ನು ದೇವನಹಳ್ಳಿಗೆ ಟಿಪ್ಪು ವಂಶಸ್ಥರು ಆಗಮನದ ದಿನದಿಂದ ಸಡಗರದಿಂದ ಆಚರಿಸಿಕೊಂಡು ಬರಲಾಗ್ತಿದೆ. ಅದರಂತೆ ಇಂದು ಕೂಡ ಬಕ್ರೀದ್ ಹಬ್ಬವನ್ನು ಆಚರಿಸಿದ್ದಾರೆ.

ತ್ಯಾಗ-ಬಲಿದಾನದ ಸಂಕೇತ ಬಕ್ರೀದ್ ಹಬ್ಬದಲ್ಲಿ ಹಜರತ್ ಇಬ್ರಾಹಿಂರ ಜೀವನದಲ್ಲಿ ಆದ ಘಟನೆ ಮೆಲಕು ಹಾಕೊ ಮೂಲಕ ಈ ಹಬ್ಬ ಆಚರಿಸುವ ಮುಕೇನ ಅಲ್ಲಾಹನನ್ನು ಪ್ರಾರ್ಥಿಸಲಾಗುತ್ತಿದೆ. ಬಕ್ರೀದ್ ಹಿನ್ನಲೆ‌ ದೇವನಹಳ್ಳಿಲಿ ಪೊಲೀಸರು ಸೂಕ್ತ ಬಂದ್ ಬಸ್ತ್ ಕಲ್ಪಿಸಿದ್ದರು..

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.

Edited By : Manjunath H D
PublicNext

PublicNext

09/07/2022 07:28 pm

Cinque Terre

55.94 K

Cinque Terre

0

ಸಂಬಂಧಿತ ಸುದ್ದಿ