ಬೆಂಗಳೂರು: ಹಿಜಾಬ್ , ಹಲಾಲ್, ಆಜಾನ್ ಹೀಗೆ ಒಂದಿಲ್ಲೊಂದು ವಿಚಾರಕ್ಕೆ ಧರ್ಮ ಸಂಘರ್ಷ ನಡೆಯುತ್ತಲೇ ಇದೆ. ಇದ್ರ ನಡುವೆಯೇ ನಾವೆಲ್ಲರೂ ಒಂದು ಎಂದು ಭಾವೈಕ್ಯತೆ ಮೆರೆವ ಬೆಂಗಳೂರಿನ ಕರಗ ಮಹೋತ್ಸವ ಪ್ರಾರಂಭವಾಗ್ತಿದೆ.. ಹಿಂದೂ, ಮುಸ್ಲಿಂರು ಒಂದುಗೂಡುವ ಈ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಗುತ್ತದೆ.. ಕರಗ ಮಹೋತ್ಸವವು ಶುಭಕೃತು ನಾಮ ಸಂವತ್ಸರದ ಚೈತ್ರ ಶುದ್ಧ ಸಪ್ತಮಿ ನಿನ್ನೆಯಿಂದ ಅರಂಭವಾಗಲಿದ್ದು, ಏ.16ರಂದು ಪ್ರತಿವರ್ಷದಂತೆ ಈ ವರ್ಷವು ಕರಗ ಮೆರವಣಿಗೆ ತವಕ್ಕಲ್ ಮಸ್ತಾನ್ ದರ್ಗಾವನ್ನು ಪ್ರವೇಶಿಸಲಿದೆ.. ಈ ಸಾಲಿನ ಕರಗವನ್ನು ಪೂಜಾರಿ ಎ. ಜ್ಞಾನೇಂದ್ರ ಅವರು ಹೊರಲಿದ್ದಾರೆ,'' ಎಂದು ಬೆಂಗಳೂರು ಕರಗ ಉತ್ಸವದ ಸಮಿತಿ ತಿಳಿಸಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕರಗ ಉತ್ಸವ ಮುಸ್ಲಿಮರ ಸಹಭಾಗಿತ್ವದೊಂದಿಗೆ ನಡೆಯಲಿದೆ.. ಎ.16ರಂದು ನಡೆಯಲಿರುವ ಕರಗವು ಮಸ್ತಾನ್ ಸಾಬ್ ದರ್ಗಾ ಪ್ರವೇಶಿಸಿ, ದರ್ಗಾವನ್ನು ಒಂದು ಸುತ್ತು ಹಾಕಿ, ನಂತರ ವಾಪಸಾಗಲಿದೆ.. ಪ್ರತಿ ವರ್ಷದಂತೆ ದರ್ಗಾದಿಂದ ಬಂದು ಕರಗ ಹೊರುವವರನ್ನು ಆಹ್ವಾನಿಸಲಾಗುತ್ತದೆ.. ಹಾಗಾಗಿ ಕರಗ ಉತ್ಸವಕ್ಕೆ ಈ ವರ್ಷವೂ ಮುಸ್ಲಿಂ ಮುಖಂಡರಿಗೆ ಆಹ್ವಾನ ನೀಡಲಾಗಿದೆ.. ದರ್ಗಾ ಪ್ರವೇಶಕ್ಕೆ ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ,'' ಎಂದು ಬೆಂಗಳೂರು ಕರಗ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ತಿಳಿಸಿದ್ದಾರೆ..
ಹಾಗಾದ್ರೆ ಈ ಬಾರಿಯ ಕರಗದ ನಕ್ಷೆ ನೋಡುವುದಾದ್ರೆ, ಏ.16ರಂದು ಕರಗ ಉತ್ಸವ ಮೆರವಣಿಗೆ ನಡೆಯಲಿದೆ.. ಅಂದು ರಾತ್ರಿ ಕರಗ ಮೆರವಣಿಗೆ ಮೊದಲು ಧರ್ಮರಾಯ ಸ್ವಾಮಿ ದೇಗುಲ ಪ್ರದಕ್ಷಿಣೆ ಹಾಕಿ ದೇಗುಲದ ರಸ್ತೆ ಮೂಲಕ ಕುಂಬಾರಪೇಟ್ ರೋಡ್ ಸಾಗಿ ಅನಂತರ ರಾಜ ಮಾರ್ಕೆಟ್ ಸರ್ಕಲ್ ತಲುಪಿ ಅಲ್ಲಿಂದ ಸಿಟಿ ಮಾರ್ಕೆಟ್ ಸರ್ಕಲ್ ಕಡೆ ಮೆರವಣಿಗೆ ಸಾಗಲಿದೆ.. ಅಲ್ಲಿಂದ ಕೋಟೆ ಆಂಜನೇಯ ಸ್ವಾಮಿ ದೇಗುಲ ತೆರಳಿ ಅಲ್ಲಿಂದ ವಾಪಾಸ್ ಸಿಟಿ ಮಾರ್ಕೆಟ್ ಸರ್ಕಲ್ ಮೂಲಕ ಪೊಲೀಸ್ ರೋಡ್ ಕಡೆಗೆ ಪಯಣ ಬೆಳೆಸಲಿದೆ.. ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ರಸ್ತೆಯಿಂದ ಕಾಟನ್ ಪೇಟೆ ರಸ್ತೆಯಲ್ಲಿ ಮೆರವಣಿಗೆ ಸಾಗಿ ಅಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಲಿದೆ.. ಬಳೇಪೇಟೆ ಸರ್ಕಲ್ ಮೂಲಕ ಅಣ್ಣಮ್ಮ ದೇವಿಯ ದೇವಸ್ಥಾನದತ್ತ ಮೆರವಣಿಗೆ ನಡೆಯಲಿದೆ.. ಕೊನೆಗೆ ಕಬ್ಬನ್ ಪೇಟೆ ಮುಖ್ಯ ರಸ್ತೆಯ ಮೂಲಕ ವಾಪಾಸ್ ಶ್ರೀ ಧರ್ಮರಾಯ ಸ್ವಾಮಿ ದೇಗುಲ ಪ್ರವೇಶ ಮಾಡಲಿದೆ..
ರಂಜಿತ ಸುನಿಲ್, ಮೆಟ್ರೋ ಬ್ಯೂರೊ, ಪಬ್ಲಿಕ್ ನೆಕ್ಸ್ಟ್..
PublicNext
09/04/2022 07:55 pm