ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅದ್ದೂರಿ ಕರಗ ಉತ್ಸವ : ಭರ್ಜರಿ ತಯಾರಿ

ವರದಿ - ಗಣೇಶ್ ಹೆಗಡೆ

ಬೆಂಗಳೂರು : ಕೊರೊನಾ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ನಿರ್ಬಂಧ ವಿಧಿಸಲಾಗಿದ್ದ ವಿಶ್ವ ವಿಖ್ಯಾತ ಬೆಂಗಳೂರು ಕರಗ ಈ ಬಾರಿ ಅದ್ದೂರಿಯಾಗಿ ನಡೆಯಲಿದೆ.

ಏಪ್ರಿಲ್ 8 ರಂದು ಕರಗ ಉತ್ಸವ ನಡೆಯಲಿದ್ದು, ಕರಗ ಸಮಿತಿಯವರು ಈಗಾಗಲೆ ಸಕಲ ಸಿದ್ದತೆಗಳನ್ನು ಕೈಗೊಂಡಿದ್ದಾರೆ. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕರಗ ಉತ್ಸವ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಕಾಲದಿಂದಲೂ ಕರಗ ಉತ್ಸವ ನಡೆದುಕೊಂಡು ಬರುತ್ತಿದೆ. ಉತ್ಸವ ಅರಂಭದ ದಿನದಿಂದಲೂ ಇಲ್ಲಿಯವರೆಗೆ ದೇಶ ವಿದೇಶಗಳ ಸಾವಿರಾರು ಮಂದಿಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನಗರದ ಧರ್ಮರಾಯ ಸ್ವಾಮಿ ದೇವಾಲಯ ಆವರಣವೂ ಕರಗ ಶಕ್ತ್ಯೋತ್ಸವಕ್ಕೆ ಸಿದ್ಧಗೊಳ್ತಿದೆ ಎಂದು ಕರಗ ಉತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ರಮೇಶ್ ತಿಳಿಸಿದರು. ಏಪ್ರಿಲ್ 8 ರಂದು ಕರಗ ಶಕ್ತ್ಯೋತ್ಸವ ನಗರದಲ್ಲಿ ಆರಂಭಗೊಳ್ತಿದೆ.

ಏಪ್ರಿಲ್ 14ರಂದು ಹಸಿ ಕರಗ ನಡೆಯಲಿದೆ. ಹಾಗೇ ಚೈತ್ರ ಮಾಸದ ಪೂರ್ಣಿಮೆಯಾದ ಏಪ್ರಿಲ್ 16 ರಂದು ದ್ರೌಪದಿ ದೇವಿಯ ಹೂವಿನ ಕಗರ ಶಕ್ತ್ಯೋತ್ಸವ ಜರುಗಲಿದೆ. ಸದ್ಯ ಕೊರೊನಾ ಕಡಿಮೆಯಾಗಿರೋ ಹಿನ್ನಲೆ ಸರ್ಕಾರ ಜಾತ್ರೆ, ಮಹೋತ್ಸವಕ್ಕೆ ಅವಕಾಶ ಕಲ್ಪಿಸಿದೆ.

Edited By : Shivu K
Kshetra Samachara

Kshetra Samachara

07/04/2022 12:23 pm

Cinque Terre

1.53 K

Cinque Terre

0

ಸಂಬಂಧಿತ ಸುದ್ದಿ