ಬೆಂಗಳೂರು: ಬೆಂಗಳೂರಿನಲ್ಲಿ ಎತ್ತರದ ಕಟ್ಟಡಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಜಾನ್ ನಿಂದ ಜಾಸ್ತಿ ತೊಂದರೆ ಆಗುತ್ತಿದೆ.
ನಮ್ಮ ಧರ್ಮದಲ್ಲಿ ಯಾರಿಗೂ ತೊಂದರೆ ಕೊಡಲು ಅವಕಾಶವಿಲ್ಲ. ಅದಕ್ಕೆ ನಾವೇ ಮುಂದೆ ಬಂದು ಡಿವೈಸ್ ರೆಡಿ ಮಾಡಿದ್ದೇವೆ. ಆ ಡಿವೈಸ್ ಸೌಂಡ್ ಕಂಟ್ರೋಲ್ ಮಾಡುತ್ತದೆ. ಈಗ ಕರ್ನಾಟಕದಲ್ಲಿರುವ ಎಲ್ಲ 12,000 ಮಸೀದಿಗಳಲ್ಲಿ ಈ ಉಪಕರಣ ಅಳವಡಿಕೆಗೆ ಸಿದ್ಧತೆ ಮಾಡಿದ್ದೇವೆ.
ಲೌಡ್ಸ್ಪೀಕರ್ನಿಂದಾಗಿ ಬೆಂಗಳೂರು ನಗರದ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಇಲ್ಲಿ ಇಂಥ ಉಪಕರಣಗಳನ್ನು ಆ್ಯಕ್ಟಿವೇಟ್ ಮಾಡಲಾಗಿದೆ ಎಂದು ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ಹೇಳಿದರು.
ನಮ್ಮ ಮಸೀದಿ ಮೇಲೆ ಹಾಕಿರುವ ಧ್ವನಿವರ್ಧಕ ತೆಗೆಯುವ ಬಗ್ಗೆ ಚರ್ಚೆ ಆಗುತ್ತಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಮಸೀದಿ, ಮಂದಿರ, ಚರ್ಚ್, ಗುರುದ್ವಾರಕ್ಕೆ ಸಂಬಂಧಿಸಿದ ಆದೇಶ ಹೊರಡಿಸಿ ಯಾವ ಏರಿಯಾದಲ್ಲಿ ಎಷ್ಟು ಡಿಬಿಎಸ್ ಶಬ್ದ ಬರಲು ಅವಕಾಶ ಇದೆ ಎಂದು ಸ್ಪಷ್ಟಪಡಿಸಿದೆ. ಕೈಗಾರಿಕಾ ಪ್ರದೇಶದಲ್ಲಿ ಹಗಲು 75 ಡಿಬಿಎಸ್ ಇರಬೇಕು, ರಾತ್ರಿ ವೇಳೆ 70 ಡಿಬಿಎಸ್ ಇರಬೇಕು.
ವಾಣಿಜ್ಯ ಪ್ರದೇಶಗಳಲ್ಲಿ ಹಗಲು 75 ಡಿಬಿಎಸ್ ಇರಬೇಕು, ರಾತ್ರಿ ವೇಳೆ 55 ಡಿಬಿಎಸ್ ಇರಬೇಕು. ಜನವಸತಿ ಪ್ರದೇಶಗಳಲ್ಲಿ ಹಗಲು 55 ಡಿಬಿಎಸ್, ರಾತ್ರಿ ವೇಳೆ 45 ಡಿಬಿಎಸ್ ಇರಬೇಕು. ಸೈಲೆಂಟ್ ಜೋನ್ಗಳಲ್ಲಿ ಆಸ್ಪತ್ರೆ, ಶಾಲೆಗಳಿರುವ ಜಾಗದಲ್ಲಿ ಹಗಲು 50 ಡಿಬಿಎಸ್, ರಾತ್ರಿ ವೇಳೆ 40 ಡಿಬಿಎಸ್ ಇರಬೇಕು ಎಂದು ವಿವರಿಸಿದರು.
ಈ ಆದೇಶ ಪಾಲನೆಗಾಗಿಯೇ ನಾವು ಉಲೇಮಾಗಳೊಂದಿಗೆ ಸೇರಿ ಒಂದು ನಿಯಂತ್ರಣ ಉಪಕರಣ ರೂಪಿಸಿದ್ದೇವೆ. ಎಷ್ಟು ಡಿಬಿಎಸ್ ಇರಬೇಕು ಎಂದು ಸೆಟ್ ಮಾಡಿಕೊಂಡರೆ ಅದು ಅಷ್ಟರಲ್ಲಿಯೇ ಕೆಲಸ ಮಾಡುತ್ತದೆ. ಈ ಬಗ್ಗೆ ನಾವು ಡಿಜಿಪಿ ಕಚೇರಿಗೆ ಹೋಗಿ ಡೆಮೊ ಕೊಟ್ಟಿದ್ದೆವು. ಮಾವಳ್ಳಿ ಮಸೀದಿಯಲ್ಲಿ ಮಾಲಿನ್ಯ ನಿಯಂತ್ರನ ಮಂಡಳಿ ಅಧಿಕಾರಿಗಳು 24 ಗಂಟೆಗಳ ಕಾಲ ಎಷ್ಟು ಡಿಬಿಎಸ್ನಲ್ಲಿ ಸೌಂಡ್ ಬರುತ್ತೆ ಅಂತ ಚೆಕ್ ಮಾಡಿದ್ದಾರೆ. ಈ ಡಿವೈಸ್ ಮಸೀದಿ ಮಾತ್ರವಲ್ಲ ಮಂದಿರ, ಚರ್ಚ್ಗೂ ಉಪಯುಕ್ತ ಎಂದರು.
PublicNext
05/04/2022 08:33 am