ಬೆಂಗಳೂರು: ದೇವಾಲಯ ಸುತ್ತಮುತ್ತ ಅನ್ಯಧರ್ಮೀಯರ ಅಂಗಡಿ ತೆರವು ಪ್ರಕರಣ ಬೆಂಗಳೂರಲ್ಲೂ ನಡೆಯಲಾರಂಭಿಸಿದೆ. ಹೌದು, ಉಪ್ಪಾರಪೇಟೆಯ ಶ್ರೀ ಆಂಜನೇಯ ದೇವಸ್ಥಾನ ಮುಂಭಾಗದ ಶೂ ಅಂಗಡಿಯನ್ನು ಹಿಂದೂ ಪರ ಸಂಘಟನೆಗಳು ಮುಚ್ಚಿಸಿದೆ.
ಮುಸ್ಲಿಂ ಸಂಘಟನೆಗೆ ದೇವಾಲಯದ ಮುಂದೆ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಹೀಗಾಗಿ ಮುಚ್ಚುವಂತೆ ಹಿಂದೂ ಸಂಘಟನೆಯವರು ಪ್ರತಿಭಟನೆ ನಡೆಸಿದರು.
ಇನ್ನು, ವಿಷಯ ತಿಳಿಯುತ್ತಿದ್ದಂತೆಯೇ ಮುಜರಾಯಿ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್ ಅರವಿಂದ ಬಾಬು ಹಾಗೂ ದೇವಸ್ಥಾನ ಆಡಳಿತ ಮಂಡಳಿಯವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Kshetra Samachara
23/03/2022 11:06 pm